ಮೀನು ರಫ್ತು: ಸುಳ್ಳು ಲೆಕ್ಕ ತೋರಿಸಿ ಮಾಲೀಕಗೆ ವಂಚನೆ
ಮಂಗಳೂರು: ವಿದೇಶಕ್ಕೆ ಮೀನು ರಫ್ತು ಮಾಡುವಾಗ ಸುಳ್ಳ ಲೆಕ್ಕ ತೋರಿಸಿದ ಸಂಸ್ಥೆ ಉದ್ಯೋಗಿ 3 ಕೋಟಿ ನುಂಗಿ ಹಾಕಿದ್ದಾನೆ. ಆರೋಪಿ ಶಮೀರ್ ಪಾಷಾ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ ಕಂಪೆನಿಗೆ ಸುಳ್ಳು ಲೆಕ್ಕ ತೋರಿಸಿ ವಂಚನೆ ಮಾಡುತ್ತಿದ್ದ. ಹೇಗೆಂದರೆ 120 ಮೀನುಗಳನ್ನು ಕಳುಹಿಸಿ ಕೇವಲ 100 ಮೀನುಗಳ ಲೆಕ್ಕ ತೋರಿಸುತ್ತಿದ್ದ. 20 ಮೀನುಗಳ ಹಣ ಉದ್ಯೋಗಿ ಜೇಬಿಗೆ. ಹೀಗೆ ಅನೇಕ ಬಾರಿ ಮೋಸ ಮಾಡಿದ್ದು 3 ಕೋಟಿ ವರೆಗೆ ವಂಚಿಸಿದ ಬಗ್ಗೆ ಭರತ್ ಏಜೆನ್ಸಿ ಮಾಲೀಕರು ದೂರು ನೀಡಿದ್ದಾರೆ.
ಯುವತಿ ನಾಪತ್ತೆ: ದೂರು
ಸುಳ್ಯ: ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕದಲ್ಲಿರುವ ಲಿಂಗಪ್ಪ ಎಂಬವರ ಪುತ್ರಿ ಪ್ರಭಾವತಿ (17) ಜ.28ರಂದು ಮನೆಯಿಂದ ಹೋದವಳು ಬಳಿಕ ನಾಪತ್ತೆಯಾಗಿರುವುದಾಗಿ ಆಕೆಯ ಮಾವ ಕೃಷ್ಣಮೂರ್ತಿ ಎಂಬವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. 4.5 ಅಡಿ ಎತ್ತರದ, ಸಪೂರ ಶರೀರದ ಕನ್ನಡ, ತುಳು ಮಾತನಾಡಬಲ್ಲ ಈಕೆಯನ್ನು ಕಂಡಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಸುಳ್ಯ ಠಾಣಾಧಿಕಾರಿ ಕೋರಿದ್ದಾರೆ.