ಲಕ್ಷ ಮೌಲ್ಯದ ಸೊತ್ತು ಕಳವು
ಮಂಗಳೂರು: ಕಂಕನಾಡಿ ಕಪಿತಾನಿಯೊ ರಸ್ತೆಯ ಕರಾವಳಿ ಟ್ರೇಡರ್ಸ್ ಹಾಡ್ ರ್ವೇರ್ ಮಳಿಗೆಗೆ ನುಗ್ಗಿದ ಕಳ್ಳರು, 1 ಲಕ್ಷ ಮೌಲ್ಯದ ಸ್ಟೀಲ್ ಟ್ಯಾಪ್, ಲ್ಯಾಪ್ ಟಾಪ್ಗಳನ್ನು ಕಳವು ಮಾಡಿದ್ದಾರೆ. ಶ್ರೀವತ್ಸ ಭಟ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಬೈಲ್ ಮಳಿಗೆಯಲ್ಲಿ ಕಳವು
ಮಂಗಳೂರು: ಹೊಯ್ಗೆ ಬಜಾರ್ ಹುದೈಪ ಮೊಬೈಲ್ ಮಳಿಗೆಗೆ ನುಗ್ಗಿದ ಕಳ್ಳರು ಕಂಪ್ಯೂಟರ್, ಮೊಬೈಲ್, ಬ್ಯಾಟರಿ ಸಹಿಂತ 23,500 ಮೌಲ್ಯದ ಸೊತ್ತು ಕಳವು ಮಾಡಿದ್ದಾರೆ. ಮಾಲೀಕ ಮಹಮ್ಮದ್ ಶರೀಪ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಸಿದು ಬಿದ್ದು ವ್ಯಕ್ತಿ ಸಾವು
ಬಂಟ್ವಾಳ: ಮನೆಯ ಜಗಲಿಯಲ್ಲಿ ಕುಳಿತಿದ್ದ ಕೂಲಿಕಾರ್ಮಿಕರೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಲೊರೆಟ್ಟೋಪದವು ಬಳಿ ನಡೆದಿದೆ. ಇಲ್ಲಿನ ಲೆವಿನ್ ಎಂಬ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ವೀರಪ್ಪ (45) ಎಂಬಾತನೇ ಮೃತ ದುರ್ದೈವಿ. ಇವರ ಕುಟುಂಬ ಈ ಸಂಸ್ಥೆಯ ವಸತಿಗೃಹದಲ್ಲಿ ವಾಸ್ತವ್ಯವಿದ್ದು, ಭಾನುವಾರ ಮನೆಯ ಜಗಲಿಯಲ್ಲಿ ಕುಳಿತಿದ್ದ ವೇಳೆ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ತಕ್ಷಣ ಬಂಟ್ವಾಳ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೀರಪ್ಪರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.