ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಕಲಚೇತನರ ಬಸ್ ಪಾಸ್ ನವೀಕರಣ ಸೂಚನೆ

Lingaraj Badiger
Updated On : 4 Feb 2013, 12:53 pm

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಕಲ ಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ.ವ್ಯಾಪ್ತಿಯಲ್ಲಿ ಪ್ರಯಾಣಿಸಲು ನೀಡಿರುವ ರಿಯಾಯ್ತಿ ದರದ ಬಸ್ ಪಾಸ್‌ಗಳ ಅವಧಿಯು ಡಿ.31ಕ್ಕೆ ಕೊನೆಗೊಂಡಿದೆ. ಆದ್ದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಪಾಸ್‌ಗಳ ಅವಧಿಯನ್ನು ಫೆ.28ರೊಳಗೆ ನವೀಕರಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಇಂದಿನಿಂದ ಮೂತ್ರಪಿಂಡ ಉಚಿತ ತಪಾಸಣೆ
ಮಂಗಳೂರು: ಎ.ಜೆ. ಆಸ್ಪತ್ರೆ, ಸಂಶೋಧನಾ ಕೇಂದ್ರದಲ್ಲಿ ಉಚಿತ ಮೂತ್ರಪಿಂಡ ತಪಾಸಣಾ ಶಿಬಿರ 4ರಿಂದ 16ರ ವರೆಗೆ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ನಡೆಯಲಿದೆ. ಮೂತ್ರಪಿಂಡದಲ್ಲಿ ಕಲ್ಲು, ಪ್ರೋಸ್ಟೇಟ್ ಗ್ರಂಥಿಗೆ ಸಂಬಂಧಿಸಿದ ತೊಂದರೆಗಳು, ಮೂತ್ರಪಿಂಡ ವೈಫಲ್ಯತೆ, ಮೂತ್ರಪಿಂಡಕ್ಕೆ ಸಂಬಂಧಿತ ತೊಂದರೆ ಇದ್ದವರು 0824- 2225533ನ್ನು ಸಂಪರ್ಕಿಸಬಹುದು.
ಇಂದು ತರಬೇತಿ, ಪ್ರಾತ್ಯಕ್ಷಿಕೆ
ಮಂಗಳೂರು: ಮಂಗಳೂರು ಕೃಷಿ ವಿಜ್ಞಾನಕೇಂದ್ರದಲ್ಲಿ ಕೃಷಿ ನಿರತ ಮಹಿಳಾ ದಿನಾಚರಣೆ ಅಂಗವಾಗಿ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಫೆ.4ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಏರ್ಪಡಿಸಿದೆ. ಆಸಕ್ತ ರೈತರು/ರೈತ ಮಹಿಳೆಯರು ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘದ ಯುವತಿಯರು ಫೆ.3ರೊಳಗೆ ಮೊಬೈಲ್ 9008914009ನ್ನು ಸಂಪರ್ಕಿಸಬಹುದು. ಒಟ್ಟು 40 ಮಂದಿ ಶಿಬಿರಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರ ಸಂಯೋಜಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement