ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಒವೈಸಿ ವಿರುದ್ಧ ಪ್ರಕರಣ ದಾಖಲು

Lingaraj Badiger
Updated On : 5 Feb 2013, 11:53 am

ಮಂಗಳೂರು: ಹೈದರಾಬಾದ್‌ನ ಅಕ್ಬರುದ್ದೀನ್ ಒವೈಸಿ ಪ್ರಚೋದನಕಾರಿ ಭಾಷಣ ವಿರುದ್ಧ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಕೋಮುದ್ವೇಷ ಹಬ್ಬಿಸುವ ಮಾತುಗಳನ್ನಾಡಿದ ಒವೈಸಿಗೆ ಶಿಕ್ಷೆಯಾಗಬೇಕು ಎಂದು ವಕೀಲ ಕೃಷ್ಣಪ್ರಸಾದ್ ಮತ್ತು ನಾರಾಯಣ ಅವರು ಕೋರ್ಟ್‌ನಲ್ಲಿ ದೂರು ಸಲ್ಲಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಪಾಂಡೇಶ್ವರ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.
ಪರ್ಸ್ ಕಾಣೆ; ದೂರು
ವಿಟ್ಲ: ದೇವಾಲಯಕ್ಕೆ ತೆರಳಿ ಮರಳುವ ಸಂದರ್ಭ ವ್ಯಕ್ತಿಯೊಬ್ಬರ ಪರ್ಸ್ ಕಾಣೆಯಾದ ಘಟನೆ ಸೋಮವಾರ ಮಧ್ಯಾಹ್ನ ವಿಟ್ಲದಲ್ಲಿ ನಡೆದಿದೆ. ಮುರುವ ಸಮೀಪದ ಬೊಳಿಂಜಡ್ಕ ನಿವಾಸಿ ನಾರಾಯಣ ಭಟ್ ದೇವಾಲಯಕ್ಕೆ ಭೇಟಿ ನೀಡಿ ಮರಳುವ ಸಂದರ್ಭ ಅವರ ಕೈಯ್ಯಲ್ಲಿದ್ದ ಚೀಲದಿಂದ ಪರ್ಸ್ ಕಾಣೆಯಾಗಿದ್ದು, ಪರ್ಸ್‌ನಲ್ಲಿ ರು. 3,500 ನಗದು, ಸಹಕಾರಿ ಬ್ಯಾಂಕ್ ಪಾಸ್ ಪುಸ್ತಕ, ಬಸ್‌ಪಾಸ್ ಕಾಣೆಯಾಗಿರುವುದಾಗಿ ವಿಟ್ಲ ಠಾಣೆಗೆ ದೂರಿನಲ್ಲಿ ತಿಳಿಸಿದ್ದಾರೆ.
ನಕಲಿ ಪಾಸ್‌ಪೋರ್ಟ್: ಸೆರೆ
ಮಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿ ಹಾಸನ ಸಾಲಿಗ್ರಾಮ ನಿವಾಸಿ ಸತೀಶ್ (47)ನನ್ನು ಪತ್ತೆ ಹಚ್ಚಿದ ಇಮಿಗ್ರೇಶನ್ ಅಧಿಕಾರಿಗಳು, ಆರೋಪಿಯನ್ನು ಬಜಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
  ಬೆಂಗಳೂರು ಲಾಲ್‌ಬಾಗ್ ನಿವಾಸಿ ಬಸವರಾಜ ಎಂಬವರ ಪಾಸ್‌ಪೋರ್ಟ್ ನಂಬರ್ ಉಪಯೋಗಿಸಿ ತನ್ನ ಹೆಸರು ಮತ್ತು ಫೋಟೋ ತಗುಲಿಸಿದ್ದು, ವಿದೇಶಕ್ಕೆ ಪ್ರಯಾಣಿಸಲು ಸಿದ್ಧನಾಗಿದ್ದ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement