ಜೆಡಿಎಸ್ ಟಿಕೆಟ್: ಪುತ್ತೂರಿಗೆ ದಿನೇಶ್, ಸುಳ್ಯಕ್ಕೆ ಸಂಕೇಶ್
ಮಂಗಳೂರು: ಪುತ್ತೂರು ವಿಧಾನಸಭೆ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ದಿನೇಶ್ ಬಿ.ಎನ್.ಗೆ, ಸುಳ್ಯಕ್ಕೆ ನಂದರಾಜ ಸಂಕೇಶ್ ಅವರನ್ನು ಅಭ್ಯರ್ಥಿಯಾಗಿ ರಾಜ್ಯಾಧ್ಯಕ್ಷರು ಘೋಷಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಪ್ರಕಟಣೆ ತಿಳಿಸಿದೆ.
ದಕ್ಷಿಣ ವಿಧಾನಸಭೆ ಕ್ಷೇತ್ರ ಸಮಿತಿ ಮಹಾಪ್ರಧಾನ ಕಾರ್ಯದರ್ಶಿಯಾಗಿಪು. ಪುಷ್ಪರಾಜ್, ಉಪಾಧ್ಯಕ್ಷರಾಗಿ ಡಾಲ್ಫಿ ವೆಲೆನ್ಸಿಯಾ, ಕಾರ್ಯದರ್ಶಿಯಾಗಿ ಎಂ.ಕಾಸಿಂ, ಅನಿಲ್ ಸಲ್ದಾನ ನೇಮಿಸಲಾಗಿದೆ.
ಮಹಿಳಾ ಘಟಕ ಕಾರ್ಯದರ್ಶಿಯಾಗಿ ಲೊಲಿಟಾ ಅವರನ್ನು ನೇಮಿಸಾಲಿಗಿದೆ.
ದಕ್ಷಿಣ ವಿಧಾನಸಭೆ ಕ್ಷೇತ್ರ ಜೆಡಿಎಸ್ ಉಸ್ತುವಾರಿಗಳಾದ ಚಿತ್ತರಂಜನ್ ರೈ, ಎಂ.ಜಿ.ಹೆಗಡೆ ಸೂಚನೆಯಂತೆ ಅಧ್ಯಕ್ಷ ಗೋಪಾಲಕೃಷ್ಣ ಅತ್ತಾವರ ಅನುಮೋದಿಸಿದರು.