ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರು. 3 ಲಕ್ಷ ಕೋಟಿ ವ್ಯವಹಾರ ದಾಟಿದ ಸಿಂಡಿಕೇಟ್ ಬ್ಯಾಂಕ್

Lingaraj Badiger
Updated On : 5 Feb 2013, 11:53 am

ಮಂಗಳೂರು: ಸಿಂಡಿಕೇಟ್ ಬ್ಯಾಂಕ್ ವರ್ಷದಲ್ಲಿ 3 ಲಕ್ಷ ಕೋಟಿ ವ್ಯವಹಾರ ಗಡಿದಾಟಿದೆ. ರು. 3 ಕೋಟಿ ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ವಿತ್ತ ವರ್ಷಾಂತ್ಯದಲ್ಲಿ ಶಾಖೆಗಳ ಸಂಖ್ಯೆಯನ್ನು 3 ಸಾವಿರಕ್ಕೆ ಏರಿಸುವ ಗುರಿ ಹೊಂದಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಆಂಜನೇಯ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 3.5 ಲಕ್ಷ ಕೋಟಿಗಳ ಜಾಗತಿಕ ವ್ಯವಹಾರ ಅತಿ ಶೀಘ್ರದಲ್ಲಿ ಮಾಡಲಿದ್ದೇವೆ. ಜಾಗತಿಕ ಠೇವಣಿ 1,64,075 ಕೋಟಿ. ಕಳೆದ ಇದೇ ಅವಧಿಗೆ ಹೋಲಿಸಿದಾಗ ಶೆ.14.64 ಪ್ರಗತಿ ಕಂಡಿದೆ.
 ಜಾಗತಿಕ ಸಾಲಗಳ ಮೊತ್ತ 1,36,648 ಕೋಟಿ, ಇದರ ಪ್ರಗತಿ ಶೇ.17.03. 3ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 1412 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಅವಧಿಗೆ ಹೋಲಿಸಿದಾಗ ಶೇ.41 ಪ್ರಗತಿ ಸಾಧಿಸಿದೆ. ನಿವ್ವಳ ಲಾಭವನ್ನು ರು. 2 ಸಾವಿರ ಕೋಟಿಗೆ ಏರಿಸುವ ಉದ್ದೇಶ ಇದೆ.
ಬ್ಯಾಂಕ್ ನಿವ್ವಳ ಅನುತ್ಪಾದಕ ಸಾಲ ಶೇ.0.85ಕ್ಕೆ ಇಳಿದಿದ್ದು, ಅನುತ್ಪಾದಕ ಸಾಲಗಳ ಬಾಬ್ತು ಶೇ.83.01 ಬಂಡವಾಳ ಕಾಯ್ದಿರಿಸಲಾಗಿದೆ. ಇದು ಇತರೆ ಬ್ಯಾಂಕ್‌ಗಳಿಗೆ ಹೋಲಿಸಿದರೆ ಅತ್ಯುತ್ತಮ. ಕಳೆದ ವರ್ಷ ಪ್ರತಿ ಶೇರ್‌ಗಳ ನಿವ್ವಳ ಆಸ್ತಿ 140.42, ಈಗ 173.33ಕ್ಕೆ ಏರಿದೆ.
 1500ಕ್ಕೂ ಹೆಚ್ಚು ಹಳ್ಳಿಗಳಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಿದೆ. ಕೇಂದ್ರ ಸರ್ಕಾರದ ಸಬ್ಸಿಡಿ ನೇರ ಪಾವತಿ ಯೋಜನೆಯಲ್ಲಿ 342ಕ್ಕೂ ಹೆಚ್ಚು ಶಾಖೆಗಳು ಸಕ್ರಿಯವಾಗಿ ಪಾಲ್ಗೊಂಡಿವೆ. ಈಗ ಅತಿ ಕಡಿಮೆ ಇ.ಎಂ.ಐ. ಗೃಹಸಾಲ, ಹಾಗೂ ವಾಹನ ಸಾಲ ವಿತರಿಸಲಾಗುತ್ತಿದೆ. ವಿಭಾಗೀಯ ಪ್ರಬಂಧಕ ಜೆ.ಎಸ್. ಶೆಣೈ, ಕೆ.ರಮೇಶ್ ಐತಾಳ್, ರವೀಂದ್ರನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು. ಇದೇ ಸಂದರ್ಭ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ 21 ಮಂದಿ ಯುವಕರಿಗೆ ಸ್ವಉದ್ಯೋಗ ವಾಹನ ಸಾಲವನ್ನು ಕಾರ್ಯನಿರ್ವಾಹಕ ನಿರ್ದೇಶಕ ಆಂಜನೇಯ ಪ್ರಸಾದ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement