ಏರ್ಕಾರ್ಗೋ: ಕೇಂದ್ರ ಒಪ್ಪಿಗೆ
ಮಂಗಳೂರು: ಮಂಗಳೂರಿನ ಬಜ್ಪೆ ಹಳೆಟರ್ಮಿನಲ್ನಲ್ಲಿ ಏರ್ಕಾರ್ಗೋ ನಿರ್ವಹಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹಣಕಾಸು ಸಚಿವಾಲಯದ ಕಸ್ಟಮ್ಸ್ ವಿಭಾಗ ಈ ಕುರಿತು ಜ.31ರಂದು ಆದೇಶ(ನಂ.15/2013) ಹೊರಡಿಸಿದ್ದು, ಇದರಿಂದ ಬಜ್ಪೆ ವಿಮಾನ ನಿಲ್ದಾಣದಿಂದ ಕಾರ್ಗೋ ನಿರ್ವಹಣೆ ಸುಲಭವಾಗಲಿದೆ. ವಿವಿಧ ಸರಂಜಾಮು, ಕೃಷ್ಯುತ್ಪನ್ನಗಳು, ತೋಟಗಾರಿಕಾ ಉತ್ಪನ್ನಗಳು, ಪುಷ್ಪೋದ್ಯಮ, ಮೀನು, ಮೀನುಗಾರಿಕಾ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ರಾಧಾಕೃಷ್ಣ ತಿಳಿಸಿದ್ದಾರೆ.