ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಣೆಯಾಗಿದ್ದ ಉಬರಡ್ಕದ ಯುವತಿ ಮಂಗ್ಳೂರಲ್ಲಿ ಪತ್ತೆ

Lingaraj Badiger
Updated On : 7 Feb 2013, 12:30 pm

ಸುಳ್ಯ: ಉಬರಡ್ಕ ಗ್ರಾಮದ ಪಾಲಡ್ಕ ಮನೆಯ ಲಿಂಗಪ್ಪ ಅವರ ಪುತ್ರಿ ಪ್ರಭಾವತಿ (17) ಜ.19ರಂದು ನಾಪತ್ತೆಯಾಗಿದ್ದು ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ.  ಬೆಳ್ತಂಗಡಿ ಕೊಕ್ಕಡದಲ್ಲಿರುವ ತನ್ನ ಸ್ನೇಹಿತೆ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ತಿರುಗಿ ಬರಲಿಲ್ಲ ಎಂದು ಆಕೆಯ ಮಾವ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಪತ್ರಿಕೆಯಲ್ಲಿ ಬಂದ ಜಾಹೀರಾತು ನೋಡಿ ಉದ್ಯೋಗಕ್ಕಾಗಿ ಮಂಗಳೂರಿಗೆ ತೆರಳಿ ಅಲ್ಲಿಯ ಹೋಂ ಪ್ರಾಡಕ್ಟ್ ಕಂಪನಿಯೊಂದರಲ್ಲಿ ಈಕೆ ಉದ್ಯೋಗ ಮಾಡುತ್ತಿದ್ದಳು.  ಪತ್ರಿಕೆಯಲ್ಲಿ ಬಂದ ನಾಪತ್ತೆ ವರದಿ ನೋಡಿ ಆಕೆ ಸುಳ್ಯ ಠಾಣೆಗೆ ಬಂದು ತನ್ನ ಇರುವಿಕೆ ಗೊತ್ತು ಪಡಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement