ಡ್ರಗ್ಸ್ ಮಾಫಿಯಾ ಹಿನ್ನೆಲೆ: ಅಂಗಡಿಗಳಿಗೆ ದಾಳಿ
ಮಂಗಳೂರು: ಮಂಗಳೂರು ನಗರದಲ್ಲಿ ಡ್ರಗ್ಸ್ ಮಾಫಿಯ ಕಾರ್ಯಾಚರಿಸುತ್ತಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಅಂಗಡಿಗಳಿಗೆ ತೆರಳಿ ಗಾಂಜಾ ಇದೆಯೊ ಎಂಬ ತನಿಖೆ ನಡೆಸಿದರು. ಆದರೆ ಎಲ್ಲೂ ಗಾಂಜಾ ಪತ್ತೆಯಾಗಿಲ್ಲ. 'ನಗರದ 4 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಎಸ್ಐ ನೇತೃತ್ವದ 4 ತಂಡ ಬುಧವಾರ ಸಂಜೆಯಿಂದಲೇ ದಾಳಿ ನಡೆಸುತ್ತಿದೆ. ಇದುವರೆಗೂ ಯಾವುದೇ ಗಾಂಜಾ ಪತ್ತೆಯಾಗಿಲ್ಲ, ಯಾವುದೇ ಲೈವ್ಬ್ಯಾಂಡ್ಗೆ ಅವಕಾಶ ನೀಡುವುದಿಲ್ಲ' ಎಂದು ಎಸಿಪಿ ಜಗನ್ನಾಥ್ ತಿಳಿಸಿದ್ದಾರೆ.