ಡ್ರಗ್ಸ್ ಮಾಫಿಯಾಗೆ ಕಾರ್ಯಪಡೆ ರಚಿಸಿ
ಮಂಗಳೂರು: ಡ್ರಗ್ಸ್ ಮಾಫಿಯಾ ಹಾವಳಿ ತಡೆಗಟ್ಟಲು ಸರ್ಕಾರ ವಿಶೇಷ ಕಾರ್ಯಪಡೆ ರಚಿಸುವಂತೆ ಮಹಿಳಾ ಆಯೋಗ ಮಾಜಿ ಅಧ್ಯಕ್ಷೆ ಕೆ.ಸಿ. ಮಂಜುಳಾ ಆಗ್ರಹಿಸಿದ್ದಾರೆ. ಹುಡುಗಿಯರು ಕಾಣೆಯಾಗುತ್ತಿರುವ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ವಿಭಾಗ ತೆರೆಯುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಹೋಮ್ಸ್ಟೇ ಪ್ರಕರಣದಲ್ಲಿ ಆಯೋಗ ಸಲ್ಲಿಸಿದ ವರದಿ, ಶಿಫಾರಸುಗಳನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಹೋಮ್ಸ್ಟೇ ಪ್ರಕರಣದಲ್ಲಿ ಪಾರ್ಟಿ ಮಾಡುತ್ತಿದ್ದವರು ಡ್ರಗ್ಸ್ ಸೇವಿಸಿದ್ದರೇ ಎಂಬ ಬಗ್ಗೆ ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿಲ್ಲ. ಹುಡುಗಿಯರನ್ನು ಇಂಥ ಪಾರ್ಟಿಗಳಲ್ಲಿ ತಪ್ಪು ಹಾದಿಗೆ ಎಳೆಯುವ ಸಾಧ್ಯತೆ ಇದೆ ಎಂದರು.