ಕಾರ್ನಾಡು ಟ್ರಸ್ಟ್ನಿಂದ ನೆರವಿನ ಮಹಾಪೂರ
ಮಂಗಳೂರು: ಕಾರ್ನಾಡು ಸದಾಶಿವರಾವ್ ಸ್ಮಾರಕ ಟ್ರಸ್ಟ್ ವತಿಯಿಂದ ಅರ್ಹ ವಿಧವೆಯರಿಗೆ, ಹಿರಿಯ ನಾಗರಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಿತ ಅನೇಕ ಮಂದಿಗೆ ನೆರವು ನೀಡುತ್ತಿದೆ. ಫೆ.9ರಂದು ಲೇಡೀಸ್ ಕ್ಲಬ್ನಲ್ಲಿ ನಡೆಯುವ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷೆ ಪ್ರಮೋದ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
7 ಮಂದಿ ವಿಧವೆಯರಿಗೆ 2ಸಾವಿರ ವಿಧವಾ ವೇತನ ನೀಡುತ್ತಿದ್ದೇವೆ. ಅರ್ಹರಿದ್ದರೆ ಎಷ್ಟು ಮಂದಿಗೂ ನೀಡಲು ತಯಾರಿದ್ದೇವೆ. ಎಚ್ಐವಿ ಸೋಂಕಿತರಿಗೆ ನೆರವು ನೀಡುವ ಅಭಿಲಾಷೆ ಟ್ರಸ್ಟ್ಗಿದೆ. ನೆರವು ಬೇಕಿದ್ದವರು, ಟ್ರಸ್ಟ್ ಸಂಪರ್ಕಿಸಬಹುದು.
ವಿದ್ಯಾಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ, ಮಂಗಳೂರು ವನ್ ಕಚೇರಿ ಚಟುವಟಿಗೆಗಳಿಗೆ 1 ಸಾವಿರ ಚದರಡಿ ವಿಸ್ತೀರ್ಣ ಕೊಠಡಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿದೆ. ಆಧಾರ್ ನೋಂದಣಿಗಾಗಿ ತಾತ್ಕಾಲಿಕ ನೆಲೆಯಲ್ಲಿ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗಿದೆ. 2012ರ ಏಪ್ರಿಲ್ನಿಂದ ಈವರೆಗೆ 6.94 ಲಕ್ಷ ಸಹಾಯಧನ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಬಲ್ಲಾಳ್, ಗುಣಶೀಲ ಬಲ್ಲಾಳ್ ಇದ್ದರು.