ಜಮ್ಮಾ ಸಮಸ್ಯೆ ಪರಿಹಾರ: ಕೊಡವ ಸಮಾಜ ಒಕ್ಕೂಟ ಅಭಿನಂದನೆ
ನಾಪೋಕ್ಲು: ಜಮ್ಮಾ ಬಾಣೆ ಮಾಲೀಕತ್ವ ತಿದ್ದುಪತಿ ವಿಧೇಯಕಕ್ಕೆ ಅಂಕಿತ ಹಾಕಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಈ ನಿಟ್ಟಿನಲ್ಲಿ ಸಹಕರಿಸಿದ ರಾಜ್ಯದ ವಿವಿಧ ಸಂಘಟನೆಗಳ ಪ್ರಮುಖರು, ಸಂಸ್ಥೆಗಳು, ಜನಪ್ರತಿನಿಧಿಗಳನ್ನು ಕೂಡವ ಸಮಾಜ ಒಕ್ಕೂಟ ಅಭಿನಂದಿಸಿದೆ. ಜಮ್ಮಾ ಬಾಣೆ ಮಾಲೀಕತ್ವ ದೊರಕಿತೆಂದು ಜಾಗವನ್ನು ಹಿಡುವಳಿದಾರರು ಯಾರಿಗೂ ಮಾರಾಟ ಮಾಡದೇ ಸ್ವಯಂ ಅಭಿವೃದ್ಧಿ ಹೊಂದಿ ಕೊಡಗಿನ ಸುಂದರ ನಿಸರ್ಗ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಒಕ್ಕೂಟದ ವಕ್ತಾರ ಡಾ. ಸನ್ನುವಂಡ ಕಾವೇರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.