ವ್ಯಕ್ತಿಗೆ ಚೂರಿಯಿಂದ ಹಲ್ಲೆ
ಬಂಟ್ವಾಳ: ವ್ಯಕ್ತಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ ಘಟನೆ ಗುರುವಾರ ಮಧ್ಯಾಹ್ನ ಬಂಟ್ವಾಳ ಜಕ್ರಿಬೆಟ್ಟಿನಲ್ಲಿ ನಡೆದಿದೆ. ಇಲ್ಲಿನ ಮಿನೇಜಸ್ ಮರದ ಮಿಲ್ ಬಳಿ ನಿವಾಸಿ ಹೇಮಂತ ಯಾನೆ ಹೇಮಚಂದ್ರ(23) ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ರಾಜೇಶ (30) ಹಲ್ಲೆ ಆರೋಪಿ. ರಾಜೇಶ ಜಕ್ರಿಬೆಟ್ಟುವಿನಲ್ಲಿ ಅಂಗಡಿ ಹೊಂದಿದ್ದು ಅಲ್ಲಿಗೆ ಹೇಮಂತ ಬಂದಾಗ ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿ ಪರಸ್ಪರ ಮಾತಿನ ಚಕಮಕಿ ನಡೆದು ಈ ಘಟನೆ ನಡೆದಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.