ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಡೋ ಪೀಡಿತರ ಬಗ್ಗೆ ನೀರಸ ಸ್ಪಂದನ: ಶ್ರೀಧರ ಗೌಡ

Lingaraj Badiger
Updated On : 9 Feb 2013, 11:07 am

ಉಪ್ಪಿನಂಗಡಿ: ರಾಜ್ಯದ ಆಡಳಿತ ನಡೆಸಿದವರ ತಪ್ಪುಗಳಿಂದಾಗಿ ಎಂಡೋ ಪೀಡಿತ ಬದುಕು ನಡೆಸಿ, ದಿನ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಎಂಡೋ ಸಂತ್ರಸ್ತರ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ನೀರಸ ಸ್ಪಂದನ ತೋರಿದ್ದು, ಇದು ಇಡೀ ಎಂಡೋ ಸಂತ್ರಸ್ತ ಪರಿವಾರಗಳ ಕರಾಳ ದಿನವೆಂದು ಎಂಡೋ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರುವ ಶ್ರೀಧರ ಗೌಡ ಕೆಂಗುಡೇಲು ನಿರಾಸೆ ವ್ಯಕ್ತಪಡಿಸಿದ್ದಾರೆ. ಬಜೆಟ್ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಂಡೋ ಸಂತ್ರಸ್ತರಿಗೆ ರು. 2 ಕೋಟಿ ಮೀಸಲಿರಿಸಲಾಗಿದೆ. ಆದರೆ, ಎಂಡೋ ಪೀಡಿತರಿಗೆ ನೀಡಿ ಎಂದು ಬೇಡಿಕೆ ಸಲ್ಲಿಸಿದ್ದ ಪರಿಹಾರಧನ, ಚಿಕಿತ್ಸೆಯ ವೆಚ್ಚ, ಮಾಶಾಸನದ ಬಗ್ಗೆ  ಸಕಾರಾತ್ಮಕ ಯೋಜನೆಗಳನ್ನು ಪ್ರಕಟಿಸದೇ ಇದ್ದು, ಇದು ಸರ್ಕಾರ ಸಂತ್ರಸ್ತರ ಕಣ್ಣೀರನ್ನು ಮುಂದಿನ ದಿನಗಳಲ್ಲೂ ನೋಡಲು ಬಯಸಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement