ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಂತೂರು ವೃತ್ತ ಕಾಮಗಾರಿ ರಾತ್ರಿ ಮಾತ್ರ!

Parashurama
Updated On : 10 Feb 2013, 12:38 pm

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚ್ಚಾಟದಲ್ಲಿ ಅರ್ಧಕ್ಕೇ ನಿಂತಿದ್ದ ನಂತೂರಿನ ವೃತ್ತ ನಿರ್ಮಾಣ ಮತ್ತೆ ಆರಂಭವಾಗಿದೆ.
ದಿನನಿತ್ಯ ಸಾವಿರಾರು ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಯು, ಅವ್ಯವಸ್ಥಿತ ಸರ್ಕಲ್ ವ್ಯವಸ್ಥೆಯಿಂದ ವಾಹನ ಸವಾರು ತೊಂದರೆಪಡುವಂತಾಗಿದೆ. ಇಬ್ಬರು ಸಂಚಾರಿ ಪೊಲೀಸರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ಕಡೆಯಿಂದ ಬರುವ ವಾಹನಗಳನ್ನು ಕ್ರಮವಾಗಿ ಕಳುಹಿಸಲು ಹರಸಾಹಸ ಪಡುವಂತಾಗಿದೆ.
ಡಾಂಬರು ಎದ್ದು ಗುಂಡಿ: ಕಳೆದ ಬಾರಿ ಅಪೂರ್ಣವಾಗಿ ನಿರ್ಮಾಣಗೊಂಡಿದ್ದ ಸರ್ಕಲ್‌ನ್ನು ಮತ್ತೆ ಕೆಡವಿ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಶುರುಮಾಡಿದೆ. ಸರ್ಕಲ್ ಪಕ್ಕದ ರಸ್ತೆಗಳು ಈಗಾಗಲೇ ಹದಗೆಟ್ಟಿದ್ದು, ಡಾಂಬರು ಎದ್ದು, ಗುಂಡಿಗಳಾಗಿವೆ. ಇದರಿಂದ ಮತ್ತೆ ವಾಹನ ಸವಾರರು ಕಿರಿಕಿರಿ ಅನುಭವಿಸುಂತಾಗಿದೆ. ಸರ್ಕಲ್‌ನಿಂದ ಕೆಪಿಟಿ ಕಡೆಗೆ ಹೋಗುವ ಎಡಬದಿಯ ರಸ್ತೆ ಎತ್ತರವಾಗಿದ್ದು, ಹೆದ್ದಾರಿ ಕಾಮಗಾರಿ ನಕ್ಷೆಯ ಪ್ರಕಾರ ಅದನ್ನು ಸಮತಟ್ಟುಗೊಳಿಸಬೇಕಾಗಿತ್ತು. ಆದರೆ ರಸ್ತೆಯ ಮಣ್ಣಿನಡಿಯಲ್ಲಿ ಬಿಎಸ್‌ಎನ್‌ಎಲ್ ಮತ್ತು ನೀರು ಸರಬರಾಜಿನ ಪೈಪುಗಳು ಇರುವುದರಿಂದ ರಸ್ತೆ ಸಮತಟ್ಟುಗೊಳಿಸಲು ಅನನುಕೂಲವಾಗಿತ್ತು. ಹಾಗಾಗಿ ಕಾಮಗಾರಿ ನಿಧಾನಗೊಂಡಿದೆ.
ನಂತೂರು ಸರ್ಕಲ್‌ನಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಹಗಲಲ್ಲಿ ಕೆಲಸ ನಡೆಸಲು ಅನುಮತಿ ಸಿಕ್ಕಿಲ್ಲ. ಇದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಹಿಂದಿನ ಟೆಂಡರ್‌ನಂತೆಯೇ ಕಾಮಗಾರಿ ಪ್ರಾರಂಭಿಸಲಾಗಿದ್ದು, ರಾತ್ರಿ ಸುಮಾರು 10 ರಿಂದ ಮುಂಜಾನೆ 4ರ ತನಕ ಕೆಲಸ ನಿರ್ವಹಿಸಲಾಗುತ್ತಿದೆ. ಕೇವಲ 6 ಗಂಟೆ ಕೆಲಸ ನಿರ್ವಹಿಸಲಾಗುತ್ತಿದ್ದು, ಇನ್ನು ಆರೇಳು ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಬಸವರಾಜ್.
ವಾರದಲ್ಲಿ ಪೂರ್ಣ ನಿರೀಕ್ಷೆ: ಇನ್ನು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸರ್ಕಲ್‌ನಿಂದ 11ಮೀ ವ್ಯಾಪ್ತಿಯ ರಸ್ತೆ ಡಾಂಬರೀಕರಣ ಕಾಮಗಾರಿ ಮಾತ್ರ ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತದೆ. ಇನ್ನು ಉಳಿದ ರಸ್ತೆ ಕೆಲಸದ ಜವಾಬ್ದಾರಿ ಪಾಲಿಕೆಯದ್ದು.
ಸರ್ಕಲ್‌ಗೆ ಬೇಕಾದ ಸಿಗ್ನಲ್ ದೀಪದ ವ್ಯವಸ್ಥೆಯನ್ನು ಇರ್ಕಾನ್ ಸಂಸ್ಥೆ ಕಲ್ಪಿಸಲಿದೆ. ಇದನ್ನು ಸುರತ್ಕಲ್‌ನಲ್ಲಿ ಪ್ರಾರಂಭಗೊಳ್ಳಲಿರುವ ಟೋಲ್ ಫೀ ಸಂಗ್ರಹಣೆಯಿಂದ ಸಂಗ್ರಹಿಸಿ ನಿರ್ಮಿಸಲಾಗುತ್ತದೆ. ಒಟ್ಟು ರು. 168 ಕೋಟಿ ವೆಚ್ಚದ ಬಿ.ಸಿ.ರೋಡ್- ಸುರತ್ಕಲ್ ಚತುಷ್ಪಥ ರಸ್ತೆ ನಿರ್ಮಾಣವು ಶೇ. 99 ಪೂರ್ಣಗೊಂಡಿದೆ. ಮರೋಳಿಯಲ್ಲಿ ರು. 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲಿ ಪೂರ್ತಿಯಾಗಲಿದೆ ಎಂದು 'ಕನ್ನಡಪ್ರಭ'ಕ್ಕೆ ಬಸವರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments