ನೂತನ ತಾಲೂಕು ಘೋಷಣೆ ಅವೈಜ್ಞಾನಿಕ: ಟಿ.ಬಿ. ಶೆಟ್ಟಿ
ಕುಂದಾಪುರ: ಶುಕ್ರವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಜೆಟ್‌ನಲ್ಲಿ ಘೋಷಿಸಿರುವ ನೂತನ ತಾಲೂಕುಗಳ ರಚನೆ ಅವೈಜ್ಞಾನಿಕವಾಗಿದೆ ಎಂದು ನ್ಯಾಯವಾದಿ ಟಿ. ಬಿ. ಶೆಟ್ಟಿ ಹೇಳಿದ್ದಾರೆ. ಅವರು ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಜೆಟ್ ಅನ್ನುವುದು ರಾಜ್ಯದ ಹಣಕಾಸಿನ ವಿಚಾರವಷ್ಟೇ ಆಗಿದ್ದು ಮುಂದಿನ ಆರ್ಥಿಕ ವರ್ಷದಲಿ ಸರ್ಕಾರಕ್ಕೆ ಬರುವ ಆದಾಯ ಹಾಗೂ ಸರ್ಕಾರ ಅದನ್ನು ಹೇಗೆ ವ್ಯಯಿಸುತ್ತದೆ ಎಂಬುದರ ಯೋಜನೆಯಾಗಿರುತ್ತದೆ.
ಅದರಂತೆ ಮುಖ್ಯಮಂತ್ರಿಗಳು ತಮ್ಮ ಬಜೆಟ್ಟಿನಲ್ಲಿ ಘೋಷಿಸಿರುವುದು ನೂತನ ತಾಲೂಕು(ರಚನೆಯಾದರೆ)ಗಳಿಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆಯೇ ಹೊರತು, ತಾಲೂಕಿನ ಘೋಷಣೆ ಮಾಡಿಲ್ಲ. ಬಜೆಟ್ಟಿನಲ್ಲಿ ಅಂತಹ ಘೋಷಣೆ ಮಾಡುವುದಕ್ಕೆ ಸಾಧ್ಯವೂ ಇಲ್ಲ ಎಂದವರು ಹೇಳಿದರು. ತಾಲೂಕು ರಚನೆಗೆ ಅದರದ್ದೇ ಆದ ವೈಜ್ಞಾನಿಕ, ಆಡಳಿತಾತ್ಮಕ ಹಾಗೂ ತಾಂತ್ರಿಕ ವರದಿಗಳನ್ನು ತಜ್ಞರ ಮುಖಾಂತರ ಮಾಡಿಸಿ ಅದರ ಆದಾರದ ಮೇಲೆ ಮುಂದಿನ ಪ್ರಕ್ರಿಯೆಯಾಗುತ್ತದೆ. ಆದರೆ ಅದನ್ನು ಬಜೆಟ್‌ನಲ್ಲಿ ಮಾಡುವುದಕ್ಕೆ ಕಾನೂನಿನ ಅವಕಾಶ ಇಲ್ಲ. ಆದರೆ ಬಿಜೆಪಿ ಜನಸಾಮಾನ್ಯರಲ್ಲಿ ತಾಲೂಕು ರಚನೆಯ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸಿದೆ. ವಿಜಯೋತ್ಸವ ಆಚರಿಸುತ್ತಿರುವ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದವರು ಮನವಿ ಮಾಡಿದರು.
ವಂಡ್ಸೆ ಹೋಬಳಿ ಹೋರಾಟ ಸಮೀತಿ ಅಧ್ಯಕ್ಷ ಡಾ. ಅತುಲ್ ಕುಮಾರ ಶೆಟ್ಟಿ, ಚಿತ್ತೂರು ಗ್ರಾಪಂ ಅಧ್ಯಕ್ಷ ಸುರೇಂದ್ರ ಶೆಟ್ಟಿ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.