ಇಂದಿನಿಂದ ಏಳಿಂಜೆ ಜಾತ್ರೆ
ಮೂಲ್ಕಿ: ಏಳಿಂಜೆಯ ಶ್ರೀ ಲಕ್ಷ್ಮೀ ಜನಾರ್ಧನ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವವು 11ರಿಂದ 16ರವರೆಗೆ ಜರಗಲಿದೆ. 12ರಂದು ಧ್ವಜಾರೋಹಣ, 15ರಂದು ಕವಾಟೋದ್ಘಾಟನೆ, ಚೂರ್ಣೋತ್ಸವ, ರಾತ್ರಿ ರಥೋತ್ಸವ, ಧ್ವಜಾವರೋಹಣ, ದೈವಗಳಿಗೆ ನೇಮೋತ್ಸವವು ಜರಗಲಿದೆ.
ಇಂದಿನಿಂದ ಅಭಿಯಾನ
ಮಂಗಳೂರು: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಶೇಷನ್ ಆಫ್ ಇಂಡಿಯಾ (ಎಸ್ಐಒ) ಮಂಗಳೂರು ಘಟಕ ವತಿಯಿಂದ ಫೆ. 11 ರಿಂದ 16ರವರೆಗೆ ಮಾದಕ ದ್ರವ್ಯಗಳ ದುಷ್ಪರಿಣಾಮದ ಕುರಿತ ಜಾಗೃತಿ ಅಭಿಯಾನ ನಡೆಯಲಿದೆ.
ಬಸದಿ ನವೀಕರಣ
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಪೆರಿಂಜೆ ಭಗವಾನ್ 1008 ಶ್ರೀ ಪುಷ್ಪದಂತ ಸ್ವಾಮಿ ಬಸದಿ ನವೀಕರಣಗೊಂಡಿದ್ದು, 11 ರಿಂದ 15 ರವರೆಗೆ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಈ ಐದೂ ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.