ಗೆಳತಿಯಿಂದ ಜೆಡಿಎಸ್ ಮುಖಂಡನ ಕೊಲೆ
ಮಂಗಳೂರು: ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಕೊಲೆಗೆ ಸಂಬಂಧಿಸಿ ಬಜ್ಪೆ ಪೊಲೀಸರು ಕೋಡಿಕಲ್ ನತಾಶ(28) ಎಂಬಾಕೆಯನ್ನು ಬಂಧಿಸಿದ್ದಾರೆ.
ಡಿ.23ರಂದು ಎಂಆರ್ಪಿಎಲ್ ಗೇಟ್ ಬಳಿ ಗಿರೀಶ್ರನ್ನು ಕೊಲೆ ಮಾಡಲಾಗಿತ್ತು. ಕೊಲೆ ಹಿಂದೆ ರಾಜಕೀಯ ಕಾರಣ ಕಂಡು ಬಂದಿರಲಿಲ್ಲ. ಚಿನ್ನಾಭರಣ, ಹಣದ ಆಸೆಯಿಂದಲೇ ದರೋಡೆ ಮಾಡಲಾಗಿದೆ ಎಂಬ ಸಂಶಯ ಪೊಲೀಸರಿಗಿತ್ತು. ಪ್ರಕರಣ ಭೇದಿಸಿದ ಪೊಲೀಸರು ಯುವತಿಯನ್ನು ಬಂಧಿಸಿದ್ದು, 23ರವರೆಗೆ ನ್ಯಾಯಾಂಗ ಬಂಧನ ಆರೋಪಿಯನ್ನು ಒಪ್ಪಿಸಲಾಗಿದೆ.