ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜೆಡಿಎಸ್ ಮುಖಂಡ ಗೆಳತಿಯಿಂದಲೇ ಕೊಲೆ

Lingaraj Badiger
Updated On : 11 Feb 2013, 11:40 am

ಮಂಗಳೂರು: ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಕೊಲೆಗೆ ಸಂಬಂಧಿಸಿ ಬಜಪೆ ಪೊಲೀಸರು ಕೋಡಿಕಲ್ ನತಾಶ(28) ಎಂಬಾಕೆಯನ್ನು ಬಂಧಿಸಿದ್ದಾರೆ. ಡಿ.23ರಂದು ಎಂಆರ್‌ಪಿಎಲ್ ಗೇಟ್ ಬಳಿ ಕೊಲೆ ಮಾಡಲಾಗಿತ್ತು. ಕೊಲೆ ಹಿಂದೆ ರಾಜಕೀಯ ಕಾರಣ ಕಂಡು ಬಂದಿರಲಿಲ್ಲ. ಚಿನ್ನಾಭರಣ, ಹಣದ ಆಸೆಯಿಂದಲೇ ದರೋಡೆ ಮಾಡಲಾಗಿದೆ ಎಂಬ ಸಂಶಯ ಪೊಲೀಸರಿಗೆ ಬಂದಿತ್ತು. ಪ್ರಕರಣ ಭೇದಿಸಿದ ಪೊಲೀಸರು ಯುವತಿಯನ್ನು ಬಂಧಿಸಿದ್ದು, 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಕಾರಾಗೃಹಕ್ಕೆ ಕಳಿಹಿಸಲಾಗಿದೆ. ನತಾಶ ಗಿರೀಶ್ ಜತೆಯಲ್ಲಿಯೇ ಓಡಾಡುತ್ತಿದ್ದು, ಹಣಕ್ಕಾಗಿ ಇನ್ನಿಬ್ಬರ ಜತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಪೊಲೀಸರು ಬಾಕಿ ಉಳಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.
ಅಪಘಾತ: ಬೈಕ್ ಸವಾರನಿಗೆ ಗಾಯ
ಮೂಲ್ಕಿ: ಕೆಂಚನಕೆರೆ ಶಾಲೆಯ ಬಳಿಯ ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಶನಿವಾರ  ಬೆಳಗ್ಗೆ ಮೂಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಕಿನ್ನಿಗೋಳಿಯ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಚಾಲಕ ಸುರೇಶ್ ಸುನೀಲ್ ಸಿಕ್ವೇರಾ ಅವರ ಅಜಾಗ್ರತೆ ಹಾಗೂ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.  ತೀವ್ರವಾಗಿ ಗಾಯಗೊಂಡಿರುವ ಮೋಟಾರ್ ಸೈಕಲ್ ಸವಾರ ಉದಯ ಆಚಾರ್ಯ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಸಾವು
ಉಡುಪಿ: ವಿಪರೀತ ಮದ್ಯಪಾನ ಮಾಡಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಸಂತೆಕಟ್ಟೆ ಎಂಬಲ್ಲಿ ನಡೆದಿದೆ. ಮೃತರು ಡೇನಿಸ್ ಡಿ' ಸೋಜ (35), ಸ್ಥಳೀಯ ನಿವಾಸಿ, ಅವರಿಗೆ ವಿಪರೀತ ಮದ್ಯಪಾನ ಮಾಡುವ ಚಟ ಇದ್ದು, ಶನಿವಾರ ರಾತ್ರಿ ಮದ್ಯಪಾನ ಮಾಡಿ ರಾ.ಹೆ. 66ರ ಕಾಮಗಾರಿಯ ಮೋರಿಯ ಸಮೀಪ ಮಲಗಿದ್ದು, ಹೊಟ್ಟೆಗೆ ಅನ್ನ ಆಹಾರವನ್ನು ಸೇವಿಸದೇ ಅಲ್ಲಿಯೇ ಮೃತಪಟ್ಟಿರುವುದು ಭಾನುವಾರ ಮುಂಜಾನೆ ಪತ್ತೆಯಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಕಾರ್ಕಳ: ಇಲ್ಲಿನ ಸಾಣರು ಗ್ರಾಮದ ಕುಂಟಲ್ಪಾಡಿ ಎಂಬಲ್ಲಿಂದ ವ್ಯಕ್ತಿಯೊಬ್ಬ ಕಾಣೆಯಾಗಿರುವ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾಗಿರುವವರು ಡೋಲ್ಫಿ ಜಿ. ಸೋಜ (32), ಈತ ಇಲ್ಲಿನ ನಿವಾಸಿ ಜೂಲಿಯಾನಾ ಡಿ' ಸೋಜ ಎಂಬವರ ಮಗ. ಈತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಫೆ. 2ರಂದು ಬೆಳಗ್ಗೆ 9 ಗಂಟೆಗೆ ಮನೆಯಿಂದ ಎಂದಿನಂತೆ ಶುಭಮಂಗಳ ತೆಂಗಿನೆಣ್ಣೆ ಮಿಲ್ಲಿಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಮಿಲ್ಲಿಗೂ ಹೋಗದೆ, ವಾಪಾಸು ಮನೆಗೂ ಬಾರದೇ ಕಾಣೆಯಾಗಿದ್ದಾನೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement