ಇಂದು 'ಶ್ರೀನಿವಾಸ ಕಲ್ಯಾಣೋತ್ಸವ'
ಮಂಗಳೂರು: ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಮಾಲಾಡಿ ಕೋರ್ಟಿನಲ್ಲಿ ಫೆ. 12 ರಂದು ಸಂಜೆ 5.30ಕ್ಕೆ 'ಶ್ರೀನಿವಾಸ ಕಲ್ಯಾಣೋತ್ಸವ' ನಡೆಯಲಿದೆ. ಬೆಳಗ್ಗೆ 10.45ಕ್ಕೆ ಬಂಟ್ಸ್ಹಾಸ್ಟೆಲ್ ಮೈದಾನದಿಂದ ಬಂಗ್ರಕೂಳೂರು, ಕಾವೂರು, ದೇರಬೈಲ್ ಮೂಲಕ ದೇವರ ಮೆರವಣಿಗೆ ಹೊರಟು ಮಾಲಾಡಿ ಕೋರ್ಟಿನಲ್ಲಿ ಕಲ್ಯಾಣೋತ್ಸವ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.