ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ
ಪುತ್ತೂರು: ಕರ್ನಾಟಕ ಕೇರಳ ರಾಜ್ಯದ ಗಡಿಪ್ರದೇಶದಲ್ಲಿ ತೀರಾ ದುಸ್ಥಿತಿಯಲ್ಲಿರುವ ಈಶ್ವರಮಂಗಲ- ಸುಳ್ಯಪದವು ರಸ್ತೆ ಮತ್ತು ಮುಡ್ಪಿನಡ್ಕ- ಸುಳ್ಯಪದವು ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಪಡುವನ್ನೂರು ಗ್ರಾಮದ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಸುಳ್ಯಪದವು ಸಮೀಪದ ಪದಡ್ಕ ಜಂಕ್ಷನ್ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಯಿತು.
ಕಳೆದ 20 ವರ್ಷದ ಹಿಂದೆ ಡಾಂಬರೀಕರಣಗೊಂಡಿದ್ದ ಈ ಎರಡು ರಸ್ತೆಗಳ ಈ ಎರಡು ರಸ್ತೆಗಳನ್ನು ಹೊಸದಾಗಿ ಡಾಂಬರೀಕರಣಗೊಳಿಸದಿದ್ದಲ್ಲಿ ಶಾಸಕರ ಮತ್ತು ಸಂಸದರ ಮನೆ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಸಿದರು.
ಜಯಕರ್ನಾಟಕ ಸಂಘಟನೆಯ ಪುತ್ತೂರು ತಾಲೂಕು ಅಧ್ಯಕ್ಷ ಪ್ರವೀಣ ಚಂದ್ರ ಆಳ್ವ ಮಾತನಾಡಿದರು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ನಾಯಕ್ ಸುಳ್ಯಪದವು ಅವರು ಪ್ರತಿಭಟನೆಗೆ ಚಾಲನೆ ನೀಡಿದರು.
ದುರಸ್ತಿ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿ.ಪಂ. ಸದಸ್ಯ ಪಕೀರ ಅವರು ಮುಡ್ಪಿನಡ್ಕ ಸುಳ್ಯಪದವು ರಸ್ತೆ ದುರಸ್ತಿಗಾಗಿ ಈಗಾಗಲೇ ರು. 5 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ದುರಸ್ತಿ ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗುವುದು.
ಈಶ್ವರಮಂಗಲ ಸುಳ್ಯಪದವು ರಸ್ತೆ ಡಾಂಬರೀಕರಣಕ್ಕಾಗಿ ರು. 25 ಲಕ್ಷ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ. ಶೀಘ್ರದಲ್ಲೇ ಆ ಕಾಮಗಾರಿಯನ್ನು ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಮಹಮ್ಮದ್ ಬೆಡಗನ್ನೂರು, ಸವಿತಾ, ಗಂಗಾಧರ ರೈ, ರವಿರಾಜ ರೈ ಸಜಂಕಾಡಿ, ಬಾಲಕೃಷ್ಣ ರೈ ಕುದ್ಕಾಡಿ , ಕೆ.ಪಿ. ಸಂಜೀವ ರೈ , ಲೋಕೇಶ್ ಹೆಗ್ಡೆ, ಶೇಖರ್, ಚಂದ್ರಶೇಖರ್ ಕನ್ನಡ್ಕ, ರಾಕೇಶ್ ರೈ ಕುದ್ಕಾಡಿ, ಗುರು ಪ್ರಸಾದ್ ರೈ ಕುದ್ಕಾಡಿ, ಪ್ರಶಾಂತ್ ಸುಳ್ಯಪದವು, ಸಲಾವುದ್ದೀನ್ ಪದಡ್ಕ ಮತ್ತು ಉದಯ ಕನ್ನಡ್ಕ, ಪುರಂದರ ರೈ ಕುಡ್ಕಾಡಿ , ಶೇಖರ್ ಸುಳ್ಯಪದವು, ಎಂ. ನಾಗೇಶ್ ರೈ ಮೈಂದನಡ್ಕ ಇದ್ದರು.