ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರ್ಜರಿ, ಮುಗಿಸಿ ವಿಮೆ ಸಿಕ್ಕಿದ ಬಳಿಕ ಭಾರತಕ್ಕೆ: ಸಂಸ್ಥೆ ಪ್ರತಿಕ್ರಿಯೆ

Lingaraj Badiger
Updated On : 12 Feb 2013, 11:54 am

ಮಂಗಳೂರು: ಅಪಘಾತಕ್ಕೆ ಈಡಾದ ರಚನ್ ಡಿಸೋಜ ಶಸ್ತ್ರಚಿಕಿತ್ಸೆಗೆ ವಿಮೆ ಲಭಿಸಲು ಆಸ್ಪತ್ರೆಗೆ ತನಿಖೆ ಆಗತ್ಯ. ಸರ್ಜರಿ ಮತ್ತು ವಿಮೆ ಪರಿಹಾರ ಸಿಕ್ಕಿದ ಬಳಿಕವಷ್ಟೇ ಭಾರತಕ್ಕೆ ಮರಳಬಹುದಾಗಿದೆ ಎಂದು ಕತಾರ್ ದೋಹಾದ ಸ್ಪೇಸ್ ಟ್ರೇಡಿಂಗ್ ಸಂಸ್ಥೆ ಪ್ರತಿಕ್ರಿಯಿಸಿದೆ.
 ರಚನ್ ಅನಾರೋಗ್ಯ ಪೀಡಿತನಾಗಿ ಕೆಲಸ ಮಾಡಲು ಅಸಾಧ್ಯವಾಗಿದ್ದರೂ ಆತನಿಗೆ ಪ್ರತಿ ತಿಂಗಳ ವೇತನ ಸರಿಯಾಗಿ ನೀಡುತ್ತಿದೆ. ರಚನ್ ಆನಾರೋಗ್ಯ ಪೀಡಿತನಾಗಿದ್ದರೂ ದೋಹಾದಲ್ಲಿ ಉತ್ತಮ ಪರಿಸ್ಥಿತಿಯಲ್ಲಿಯೇ ಇದ್ದಾನೆ. ನಮ್ಮ ವಿರುದ್ಧ ಉದ್ಯೋಗಿ ಒಂದೇ ಒಂದು ಮಾತು ಆಡಿಲ್ಲ. ಹೀಗಿರುವಾಗ ಹೆತ್ತವರ ಆರೋಪ ಅಚ್ಚರಿ ತಂದಿದೆ. ನಮ್ಮ ಸಂಸ್ಥೆಯಲ್ಲಿ 100 ಸಿಬ್ಬಂದಿ ಇದ್ದಾರೆ ಎಲ್ಲರು ಸಂತೃಪ್ತಿಯಿಂದ ಇದ್ದಾರೆ, ಯಾರಿಗೂ ಸಮಸ್ಯೆ ಆಗಿಲ್ಲ.
ವ್ಯವಸ್ಥಾಪಕ ನಿರ್ದೇಶಕ ಜೆರ್ರಿ ಡಿ ಮೆಲ್ಲೊ ಬಡ ಬಗ್ಗರಿಗೆ ನೆರವು ನೀಡುತ್ತಾ ದೊಡ್ಡ ದಾನಿ ಎಂದೇ ಹೆಸರಾಗಿದ್ದಾರೆ ಇದಕ್ಕೆ ಅನೇಕ ಸಾಕ್ಷಿಗಳಿವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
'ಹೆತ್ತವರ ಆರೋಪದಲ್ಲಿ ಹುರುಳಿಲ್ಲ, ಆತನ ವೇತನದ ಒಂದು ಭಾಗವನ್ನು ಮನೆಯವರಿಗೆ ಪ್ರತಿ ತಿಂಗಳು ಕಳುಹಿಸುತ್ತಿದ್ದೇವೆ. ಇದಕ್ಕೆ ಸಂಪೂರ್ಣ ದಾಖಲೆ ನೀಡುತ್ತೇವೆ' ಎಂದು ವ್ಯವಸ್ಥಾಪಕ ನಿರ್ದೇಶಕ ಜೆರ್ರಿ ಲೊಬೋ ಪ್ರತಿಕ್ರಿಯಿಸಿದ್ದಾರೆ.
---
ವಿದೇಶದಲ್ಲಿ ಸಂಕಷ್ಟದಲ್ಲಿ ಮಗ: ಭಾರತಕ್ಕೆ ಕಳುಹಿಸಲು ಹೆತ್ತವರ ಆಗ್ರಹ
ಮಂಗಳೂರು: ಕತಾರ್ ದೋಹಾದ ಸ್ಪೇಸ್ ಟ್ರೇಡಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಗ ರಚನ್ ಡಿಸೋಜ ಅಪಘಾತದಿಂದ ಮೂಲೆ ಸೇರಿದ್ದು, ಆತನನ್ನು ಸಂಪರ್ಕಕ್ಕೆ ಸಿಗದಂತೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಾಯಿ ರೂಫೀನ್ ಡಿಸೋಜ, ಒಂದುವರೆ ವರ್ಷದ ಹಿಂದೆ ಮಗನನ್ನು ಖ್ಯಾತ ಉದ್ಯಮಿ ಜೆರಾಲ್ಡ್ ಲೋಬೊ ರಚನ್‌ನನ್ನು ಕ್ರಶರ್ ಉದ್ಯೋಗಕ್ಕೆ ಕತಾರ್‌ಗೆ ಕರೆದೊಯ್ದಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಮಗನಿಗೆ ಸಣ್ಣ ಅಪಘಾತವಾಯಿತು, ಈ ಅಪಘಾತದಿಂದ ಕಿಡ್ನಿ ಗೆ ಗಾಯವಾದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಖರ್ಚನ್ನು ಕಂಪನಿಯೇ ಭರಿಸುವುದಾಗಿ ಹೇಳಿದೆ. ಗಂಭೀರ ಗಾಯವಾಗಿರುವುದರಿಂದ ಕಂಪೆನಿ ದಿನ ದೂಡುತ್ತಿದ್ದು, ಮಗನಿಂದ ಮೊಬೈಲ್ ಸಂಪರ್ಕ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುನೀರ್ ಕಾಟಿಪಳ್ಳ, ದಯಾನಂದ, ಸಿಲ್ವೆಸ್ಟರ್ ಡಿಸೋಜ, ಯೂನಿಸ್ ಡಿಸೋಜ, ರಸ್ಲಿನಾ ಡಿಸೋಜ ಇದ್ದರು.
--
ಹಲ್ಲೆ ಆರೋಪಿಗಳಿಗೆ ಜಾಮೀನು
ಪುತ್ತೂರು: ತಾಲೂಕಿನ ಹಿರೆಬಂಡಾಡಿ ಗ್ರಾಮದ ಅಡೆಕಲ್ಲು ಎಂಬಲ್ಲಿ ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಪುತ್ತೂರಿನ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಮನೋಹರ್ ಶೆಟ್ಟಿ, ಆನಂದ ಶೆಟ್ಟಿ, ಶ್ಯಾಮಲ, ಸುಜಾತ ಶೆಟ್ಟಿ, ವಿಠಲ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ ಜಾಮೀನು ಪಡೆದ ಆರೋಪಿಗಳು. ಆರೋಪಿಗಳು ಕಳೆದ ಗುರುವಾರ ಜಾಗದ ತಕರಾರಿನ ಹಿನ್ನೆಲೆಯಲ್ಲಿ ಹಿರೆಬಂಡಾಡಿ ಗ್ರಾಮದ ಅಡೆಕಲ್ಲು ನಿವಾಸಿ ರಿತೇಶ್ ಶೆಟ್ಟಿ ಎಂಬವರಿಗೆ ಹಲ್ಲೆ ನಡೆಸಿದ್ದರು ಎಂಬ ಆರೋಪವಿತ್ತು. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳು ಸೋಮವಾರ ಪುತ್ತೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದೆ. ಆರೋಪಿಗಳ ಪರವಾಗಿ ವಕೀಲರಾದ ಮಹೇಶ್ ಕಜೆ, ಕಿಶೋರ್ ಕುಮಾರ್ ಕೊಳತ್ತಾಯ, ಪ್ರಸಾದ್ ರೈ ವಾದಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement