ಹೋರಾಟಕ್ಕೆ ಬೆಂಬಲ
ಮೂಲ್ಕಿ: ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ಮೂಲ್ಕಿ ತಾಲೂಕು ರಚನೆಗೆ ಆಗ್ರಹಿಸಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಮೂರು ದಿನಗಳ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮೂಲ್ಕಿಯ ಕೆ.ಎಸ್. ರಾವ್ ನಗರದ ಮಾದಿಗ ದಾಂಡೋರ ಮೀಸಲು ಹೋರಾಟ ಸಮಿತಿ ಸದಸ್ಯರು ಕೆ.ಎಸ್. ರಾವ್ ನಗರದಿಂದ ಮೂಲ್ಕಿ ಬಸ್ಸು ನಿಲ್ದಾಣವರೆಗೆ ತಮಟೆ ಬಾರಿಸಿ ಪಾದಯಾತ್ರೆ ನಡೆಸಿ ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಸಮಿತಿ ಅಧ್ಯಕ್ಷ ಮಂಜುನಾಥ ಆರ್.ಕೆ, ಉಪಾಧ್ಯಕ್ಷ ಆಶೋಕ ಪೂಜಾರ ಇದ್ದರು.
ದ.ಕ. ಜಿಲ್ಲಾ ಫೋಟೋಗ್ರಾಫರ್ಸ್ ಎಸೋಸಿಯೇಶನ್‌ನ ಮೂಲ್ಕಿ ವಲಯವು ಮೂಲ್ಕಿ ತಾಲೂಕು ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿ ಮೂಲ್ಕಿ ತಾಲೂಕು ರಚನೆ ಆಗಬೇಕೆಂದು ಮೂಲ್ಕಿ ವಲಯದ ಕಾರ್ಯದರ್ಶಿ ಯಶವಂತ್ ಐಕಳ ತಿಳಿಸಿದ್ದಾರೆ.