15,16ರಂದು ರಾಷ್ಟ್ರ ಮಟ್ಟದ ವಿಚಾರಸಂಕಿರಣ
ಬೆಳ್ತಂಗಡಿ: 'ಪ್ರಸ್ತುತ ಭಾರತದಲ್ಲಿ ನ್ಯಾಯಸ್ಥಾಪಕ ಮನೋವಿಜ್ಞಾನದ ಪಾತ್ರ ಹಾಗೂ 21ನೇ ಶತಮಾನದಲ್ಲಿ ಎದುರಿಸಬೇಕಾದ ಸವಾಲುಗಳು' ಎಂಬ ವಿಚಾರದಲ್ಲಿ ರಾಷ್ಟ್ರ ಮಟ್ಟದ ವಿಚಾರಸಂಕಿರಣ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಫೆ.15 ಮತ್ತು 16ರಂದು ನಡೆಯಲಿದೆ. ಕಾಲೇಜಿನ ಮನೋವಿಜ್ಞಾನ ಸ್ನಾತಕೋತ್ತರ ವಿಭಾಗ ವತಿಯಿಂದ ಉಜಿರೆ ಎಸ್‌ಡಿಎಂ ನ್ಯಾಚೋರಪತಿ ಕಾಲೇಜಿನಲ್ಲಿ ನಡೆಯುವ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ನಿವೃತ್ತ ಎಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ಎಸ್. ಸುರೇಶ್ ಬಾಬು ಉದ್ಘಾಟಿಸಲಿದ್ದಾರೆ. ಚೆನ್ನೈನ ಡಾ.ಅಂಬೇಡ್ಕರ್ ಕಾನೂನು ವಿಶ್ವ ವಿದ್ಯಾನಿಲಯದ ಪ್ರೊ.ಡಾ.ಪಿ. ಚಂದ್ರ ಸೇಖರನ್, ಮೈಸೂರಿನ ಕರ್ನಾಟಕ ಪೊಲೀಸ್ ಆಕಾಡೆಮಿಯ ಪ್ರೊ.ಡಾ.ಎಂ.ಎಸ್. ಉಮಾಪತಿ, ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೆ. ರವೀಂದ್ರ, ಬೆಂಗಳೂರು ಎಕ್ಸೋನೆಟ್ ಮಿದುಳು ಸಂಶೋಧನಾ ಪ್ರಯೋಗಾಲಯದ ಅಧ್ಯಕ್ಷ ಡಾ.ಸಿ.ಆರ್. ಮುಕುಂದನ್, ಮರ್ಲಿನ್ ಮಾರ್ಟಿಸ್, ಶುಭಮಂಗಳ ಸುನೀಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಎಂ.ವೈ ಮಂಜುಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.