ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಫ್ಜಲ್ ಗುರುಗೆ ಗಲ್ಲು: ಪಿಎಫ್‌ಐ ಖಂಡನೆ

Lingaraj Badiger
Updated On : 13 Feb 2013, 11:29 am

ಮಂಗಳೂರು: ಸಂಸತ್ ಭವನ ದಾಳಿ ಆರೋಪಿಗಳಲ್ಲಿ ಒಬ್ಬನಾದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಹಲವು ರಾಷ್ಟ್ರಗಳು ಮರಣ ದಂಡನೆ ಶಿಕ್ಷೆ ವಜಾಗೊಳಿಸುತ್ತಿರುವಾಗ ಭಾರತ ಗಲ್ಲು ಶಿಕ್ಷೆ ಮುಂದುವರಿಸುತ್ತಿರುವುದು ನಿರಾಶಾದಾಯಕ ಎಂದು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಪುತ್ತೂರು ಹೇಳಿದ್ದಾರೆ.
ಅಫ್ಜಲ್ ಗುರು ವಿರುದ್ಧ ಶಿಕ್ಷೆ ಜಾರಿಗೊಳಿಸುವುದನ್ನು ಹಲವು ಕಾನೂನು ತಜ್ಞರು, ಮಾನವ ಹಕ್ಕು ಹೋರಾಟಗಾರರು ಮತ್ತು ಬುದ್ಧಿಜೀವಿಗಳು ಪ್ರಶ್ನಿಸಿದ್ದರು. ಪೊಲೀಸ್ ತನಿಖೆ ಲೋಪಗಳಿಂದ ಕೂಡಿದೆ, ಆರೋಪಿಗೆ ಸರ್ಕಾರ ಸೂಕ್ತ ಕಾನೂನು ನೆರವು ಒದಗಿಸಲು ವಿಫಲವಾಗಿತ್ತು. ಅಪ್ಝಲ್ ಗುರುವನ್ನು ಗಲ್ಲಿಗೇರಿಸಿದ್ದು ಕಾಶ್ಮೀರಿ ಜನರಲ್ಲಿ ಅಸಹನೆ ಉಂಟುಮಾಡಲಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ್ದರೆ ಉತ್ತಮ ಶಾಂತಿ ಸಂದೇಶವಾಗುತ್ತಿತ್ತು. ಫ್ಯಾಸಿಷ್ಟ್ ಶಕ್ತಿಗಳು ಪ್ರಕರಣಕ್ಕೆ ಭಾವನಾತ್ಮಕ ಆಯಾಮ ನೀಡಲು ಯತ್ನಿಸಿದವು. ಸುಪ್ರೀಂಕೋರ್ಟ್ ಕೂಡಾ ಸಮಾಜದ ಸಮಷ್ಟಿ ಪ್ರಜ್ಞೆಯನ್ನು ಸಂತೃಪ್ತಿಗೊಳಿಸಲು ತೀರ್ಪು ನೀಡಿತ್ತು. ಅಂತಿಮವಾಗಿ ಸರ್ಕಾರ ಹಿಂದುತ್ವ ಪ್ಯಾಸಿಷ್ಟ್ ಶಕ್ತಿಗಳಿಗೆ ತಲೆಬಾಗಿರುವುದು ಸ್ಪಷ್ಟವಾಗಿದೆ. ಜಾತ್ಯತೀತ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಯುಪಿಎ ಬಗ್ಗೆ ಇದು ಗಂಭೀರ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ ಎಂದು ಖಾದರ್ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement