ಗಾಂಜಾ ಮಾರಾಟ: ಮೂವರ ಬಂಧನ
ಸುಳ್ಯ: ಸುಳ್ಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಸುಳ್ಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ದೇವರಕಳಿಯ ಸುಂದರ ಎಂಬವರ ಪುತ್ರ ತೀರ್ಥ ಪ್ರಸಾದ್ (24), ಕಲ್ಲುಮುಟ್ಲು ರಫೀಕ್ ಎಂಬವರ ಪುತ್ರ ಇರ್ಫಾನ್ (18), ಜೂನಿಯರ್ ಕಾಲೇಜ್ ಬಳಿ ನಿವಾಸಿ ಶರತ್ ಎಂಬವರ ಮಗ ವಿನೋದ್ (23) ಬಂಧಿತರು. ಸರ್ಕಲ್ ಇನ್ಸ್ಪೆಕ್ಟರ್ ಎಚ್.ವಿ. ಸುದರ್ಶನ್ ಅಡಿಷನಲ್ ಎಸ್ಪಿ ಸದಾನಂದ ವರ್ಣೇಕರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಮುಖ ಆರೋಪಿ ಕಾಸರಗೋಡು ಮೂಲದ ಚೆರ್ಕ ಎಂಬಾತ ಪರಾರಿಯಾಗಿದ್ದಾನೆ. ಸುಮಾರು 300 ಗ್ರಾಂ ಗಾಂಜಾ, 3 ಮೊಬೈಲ್, 1 ವ್ಯಾಗನರ್ ಕಾರು, ರು. 550 ಸೇರಿದಂತೆ 5 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.