ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಟ್ಲ ತಾಲೂಕು ರಚನೆ ಹೋರಾಟಕ್ಕೆ ಮರುಜೀವ

Lingaraj Badiger
Updated On : 13 Feb 2013, 11:25 am

ವಿಟ್ಲ: ಶೆಟ್ಟರ್ ಸರ್ಕಾರದ 2013ನೇ ಸಾಲಿನ ಬಜೆಟ್‌ನಲ್ಲಿ ಸುಮಾರು 40 ವರ್ಷಗಳ ವಿಟ್ಲ ತಾಲೂಕು ರಚನೆಯ ಕನಸು ಕನಸಾಗಿಯೇ ಉಳಿದುಕೊಂಡದ್ದು, ವಿಟ್ಲದ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಜನರು ಮತ್ತೆ ಹೋರಾಟದ ಹಾದಿ ಹಿಡಿಯುವಂತೆ ಮಾಡಿದೆ.
ತಾಲೂಕು ರಚನೆಗೆ ಎಲ್ಲಾ ವ್ಯವಸ್ಥೆ ಇದೆ:  ಬಂಟ್ವಾಳ ಜಿಲ್ಲೆಯ ಅತಿ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ. ಇದು 84 ಗ್ರಾಮಗಳನ್ನು ಹೊಂದಿದೆ. ಇದರಲ್ಲಿಯೂ ವಿಟ್ಲ ಗ್ರಾಮ ಪಂಚಾಯಿತಿ ಅತ್ಯಂತ ದೊಡ್ಡ ಗ್ರಾಮ. ತಾಲೂಕು ರಚನೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳೂ ಇವೆ. ಸಬ್‌ರಿಜಿಸ್ಟ್ರಾರ್ ಕಚೇರಿ, ಸಮುದಾಯ ಆಸ್ಪತ್ರೆ, ನಾಡ ಕಚೇರಿ, ಮೆಸ್ಕಾಂ ಉಪವಿಭಾಗ, ಪೊಲೀಸ್ ಠಾಣೆ, ಸರ್ಕಾರಿ ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆಗಳು ಇತ್ಯಾದಿ. ಆದರೆ, ಕ್ಷೇತ್ರ ವಿಂಗಡಣೆ ಸಮಯದಲ್ಲಿ ವಿಟ್ಲ ವಿಧಾನ ಸಭಾ ಕ್ಷೇತ್ರ ಮಾಯವಾಗಿ ಮಂಗಳೂರು, ಬಂಟ್ವಾಳ, ಪುತ್ತೂರು ಕ್ಷೇತ್ರಗಳಿಗೆ ಹರಿದು ಹೋಯಿತು. ಅದರಲ್ಲೂ ಕುಗ್ರಾಮಗಳ ಮತ್ತು ಗಡಿಯ ಅಂಚಿನಲ್ಲಿರುವ ನಿವಾಸಿಗಳು ದಾಖಲೆಗಳಿಗೆ ಪುತ್ತೂರು, ಬಂಟ್ವಾಳಕ್ಕೆ ದಿನಾ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕನಸು ಫಲಿಸಲಿಲ್ಲ: ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ವಿಟ್ಲ ತಾಲೂಕು ರಚನೆಯ ಕನಸು ಫಲಿಸಲಿಲ್ಲ. ವಿಟ್ಲ ಕ್ಷೇತ್ರ ಹೋಗುವ ಸಮಯದಲ್ಲಿ ರಾಜಕೀಯ ಮುಖಂಡರು ಹೋರಾಟಗಳನ್ನು ನಡೆಸಿದ್ದರೆ ಈ ಪರಿಸ್ಥಿತಿ ವಿಟ್ಲಕ್ಕೆ ನಿರ್ಮಾಣವಾಗುತ್ತಿರಲಿಲ್ಲ ಹಾಗೂ ಜನರು ದಿನವಿಡೀ ಅಲೆಯುವ ಕಾರ್ಯವೂ ಬರುತ್ತಿರಲಿಲ್ಲ. ವಿಟ್ಲ ಪಟ್ಟಣ ಪಂಚಾಯಿತಿಯ ಸ್ಥಾನದಲ್ಲಿದೆ. ತಾಲೂಕು ಕೇಂದ್ರ ರಚನೆಯ ಎಲ್ಲಾ ಅಗತ್ಯಗಳನ್ನು ಹೊಂದಿದೆ. ತಾಲೂಕು ಕೇಂದ್ರವಾಗಿಸುತ್ತೇವೆ ಎಂದು ಚುನಾವಣೆ ಸಮಯದಲ್ಲಿ ಹೇಳುವ ರಾಜಕೀಯ ವ್ಯಕ್ತಿಗಳು, ಪಕ್ಷಗಳು ಯಾಕೆ ವಿಟ್ಲ ವಿಧಾನಸಭಾ ಕ್ಷೇತ್ರ ಕೈ ತಪ್ಪಿ ಹೋಗುತ್ತಿರುವ ಸಮಯದಲ್ಲಿ ತುಟಿ ಬಿಚ್ಚಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement