ಅಡಪಾಡಿ ಪಳ್ಳಿ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ
ಶಿರ್ವ: ಇಲ್ಲಿಗೆ ಸಮೀಪದ ಕಾರಣಿಕ ಶ್ರೀಕ್ಷೇತ್ರ ಅಡಪಾಡಿ ಪಳ್ಳಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರಿ ದೇವಳದ ಶ್ರೀಬ್ರಹ್ಮಕುಂಭಾಭಿಷೇಕ- ಶತಚಂಡಿಯಾಗ ಧಾರ್ಮಿಕ ಅನುಷ್ಠಾನಗಳು ಬುಧವಾರ ಪ್ರಾರಂಭಗೊಂಡಿವೆ.
ಪೂರ್ವಾಹ್ನ ಗಣಹೋಮ, ಶತಚಂಡಿ ಪಾರಾಯಣ, ಮಂಟಪ ಪ್ರವೇಶ ಇತ್ಯಾದಿ ವಿವಿಧ ಧಾರ್ಮಿಕ, ವೈದಿಕ ಅನುಷ್ಠಾನಗಳೊಂದಿಗೆ ಶ್ರೀಕ್ಷೇತ್ರದ ಕಾರಣಿಕ ದೈವ ಶ್ರೀಕಲ್ಕುಡ- ಕಲ್ಲುರ್ಟಿಯ ಶಿಲಾಮಯ ಗರ್ಭಗುಡಿಯಲ್ಲಿ ಪುನರ್ ಪ್ರತಿಷ್ಠೆ, ಅಣ್ಣಪ್ಪ ಸ್ವಾಮಿ, ಶ್ರೀಯಕ್ಷಿಯ ಪುನರ್ ಪ್ರತಿಷ್ಠೆ, ಮಹಾಪೂಜೆ, ಅನ್ನಸಂತರ್ಪಣೆ ಇತ್ಯದಿಗಳನ್ನು ನಡೆಸಲಾಯಿತು.
ಸಂಜೆ ಬ್ರಹ್ಮಮಂಡಲ ರಚನೆ, ಕಲಶಾಧಿವಾಸ, ವೇದ ಪಾರಾಯಣ ಧಾರ್ಮಿಕ ಅನುಷ್ಠಾನಗಳು ವೇದಮೂರ್ತಿ ಮಗೇಶ್ ಭಟ್ ಲಕ್ಷ್ಮೀಪುರ, ಮತ್ತು ವೇದಮೂರ್ತಿ ದಯಾನಂದ ಭಟ್ ಕಲ್ಲಡ್ಕ ನೇತೃತ್ವ ಹಾಗೂ ಶ್ರೀಕ್ಷೇತ್ರ ಧರ್ಮದರ್ಶಿ ಪುಂಡಲೀಕ ನಾಯಕ್ ಉಪಸ್ಥಿತಿಯಲ್ಲಿ ಪ್ರಾರಂಭಗೊಂಡವು.
ಸಂಜೆ ಗಂಟೆ 6.30ರಿಂದ ಪಡೂರು ಮೇಳದವರಿಂದ 'ಚಂದ್ರಹಾಸ ಚರಿತ್ರೆ' ಯಕ್ಷಗಾನ ಬಯಲಾಟ ಜರುಗಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.