ಕರಾವಳಿ ಪ್ರಾಧಿಕಾರಕ್ಕೆ ರು. 15 ಕೋಟಿ: ವಿಕ್ರಮಾರ್ಜುನ ಹೆಗ್ಡೆ
ಪಡುಬಿದ್ರಿ: ರಾಜ್ಯ ಸರ್ಕಾರದಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ರು. 15 ಕೋಟಿ ಅನುದಾನ ದೊರೆಯಲಿದ್ದು, ಇದನ್ನು ಕರಾವಳಿಯ 3 ಜಿಲ್ಲೆಗಳಿಗೆ ತಲಾ ರು. 5 ಕೋಟಿಗಳಂತೆ ವಿನಿಯೋಗಿಸಲಾಗುವುದು ಎಂದು ಪ್ರಾಧಿಕಾರ ಅಧ್ಯಕ್ಷ ವಿಕ್ರಮಾರ್ಜುನ ಹೆಗ್ಡೆ ಹೇಳಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ರು. 5 ಲಕ್ಷ ಅನುದಾನದಿಂದ ಹೆಜಮಾಡಿಯ ಶ್ರೀಬ್ರಹ್ಮಬೈದರ್ಕಳ ಗರಡಿ ಬಳಿ ಕಾಲು ಸಂಕ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರು. 5 ಕೋಟಿ ಬಿಡುಗಡೆ: ಈಗಾಗಲೇ ಮೊದಲ ಕಂತಿನಲ್ಲಿ ರು. 5 ಕೋಟಿ ಬಿಡುಗಡೆಯಾಗಿದೆ. ಉಳಿದ ರು. 10 ಕೋಟಿ ಫೆ. 20ರೊಳಗೆ ಬಿಡುಗಡೆಯಾಗಲಿದೆ. ಬಿಡುಗಡೆಯಾಗಿರುವ ರು. 5 ಕೋಟಿಯಲ್ಲಿ ದ.ಕ. ಜಿಲ್ಲೆಗೆ ರು. 3 ಕೋಟಿ ಮತ್ತು ಉಡುಪಿ ಜಿಲ್ಲೆಗೆ ರು. 2 ಕೋಟಿ ನೀಡಲಾಗಿದೆ. ಉಡುಪಿ ಜಿಲ್ಲೆಯ ರು. 2 ಕೋಟಿ ಅನುದಾನದಲ್ಲಿ 148 ಕಾಮಗಾರಿಗಳನ್ನು ನಡೆಸಲಾಗುವುದು. ಈ ಪೈಕಿ ಕಾಪು ಕ್ಷೇತ್ರದಲ್ಲಿ ರು. 49 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ತಾ.ಪಂ. ಸದಸ್ಯ ಸಚಿನ್ ನಾಯಕ್, ಗ್ರಾ.ಪಂ. ಅಧ್ಯಕ್ಷ ವಾಮನ ಕೋಟ್ಯಾನ್, ಮಾಜಿ ಅಧ್ಯಕ್ಷ ಸುಧಾಕರ ಕರ್ಕೇರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನೀತಾ ಗುರುರಾಜ್, ದೊಂಬ ಪೂಜಾರಿ, ತೇಜ್ಪಾಲ್ ಸುವರ್ಣ, ಮಹೇಶ್ ಸುವರ್ಣ, ಜಿನರಾಜ್ ಬಂಗೇರ, ಪ್ರಕಾಶ್ ರಾವ್, ಶೇಷಗಿರಿ ರಾವ್, ರವೀಂದ್ರ ಹೆಜ್ಮಾಡಿ, ಪ್ರಾಣೇಶ್ ಹೆಜಮಾಡಿ, ಹುಸೇನ್ ಕನ್ನಂಗಾರ್, ಆಶಾ ಶೆಣೈ ಮತ್ತಿತರರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.