ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಮಾನ ನಿಲ್ದಾಣ ಅವರಣ ಬಳಿ ಸಮೀಕ್ಷೆಗೆ ಮರ ಕಡಿತ: ಆಕ್ಷೇಪ

Parashurama
Updated On : 14 Feb 2013, 1:00 am

ಮಂಗಳೂರು: ಬಜಪೆ ವಿಮಾನ ನಿಲ್ದಾಣ ಆವರಣಗೋಡೆಗೆ ತಾಗಿಕೊಂಡಂತಿರುವ ಖಾಸಗಿ ಜಾಗದ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಮರ ಕಡಿಯಲು ಬಂದವರನ್ನು ವಾಪಸ್ ಕಳುಹಿಸಿದ್ದಾರೆ.
ಯಾವುದೇ ಮಾಹಿತಿ ನೀಡದೆ ಬಲಾತ್ಕಾರವಾಗಿ ಖಾಸಗಿ ಜಾಗಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಕ್ರಮವನ್ನು ಸ್ಥಳೀಯರು ವಿರೋಧಿಸಿದ್ದಾರೆ. ಗ್ರಾಮ ಲೆಕ್ಕಿಗ, ತೋಟಗಾರಿಕೆ ಇಲಾಖೆ ಅಧಿಕಾರಿ, ಸರ್ವೇಯರ್‌ಗಳು ಮೂರು ಬಾರಿ ಬಂದು ಸಮೀಕ್ಷೆ ನಡೆಸಿ ಹೋಗಿದ್ದಾರೆ. ಆರಂಭದಲ್ಲಿ ವಿಮಾನ ನಿಲ್ದಾಣ ಆವರಣಗೋಡೆಯ 60 ಮೀಟರ್ ದೂರದವರೆಗೆ ಸಮೀಕ್ಷೆ ನಡೆಸಬೇಕಾಗಿದೆ ಎಂದು ಮೂವರು ಅಧಿಕಾರಿಗಳು ಹೇಳಿದರು.
ಮತ್ತೊಮ್ಮೆ ಆವರಣ ಗೋಡೆಯಿಂದ 65 ಮೀಟರ್ ದೂರದವರೆಗೆ ಖಾಸಗಿ ಜಾಗದಲ್ಲಿರುವ 7 ಮೀಟರ್‌ಗಿಂತ ಎತ್ತರ ಇರುವ ಮರಗಳ ಸಮೀಕ್ಷೆ ಮಾಡುವುದಾಗಿ ಅಧಿಕಾರಿಗಳು ಹೇಳಿದರು. ಇದರ ವಿರುದ್ಧ 65 ಮಂದಿ ಜಾಗದ ಮಾಲೀಕರು ಜಿಲ್ಲಾಧಿಕಾರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದರು. ಆದರೆ ಯಾವುದೆ ಪ್ರತಿಸ್ಪಂದನ ಸಿಕ್ಕಿರಲಿಲ್ಲ.
ಬುಧವಾರ ಮೂವರು ಪಂಚಾಯ್ತಿ ಮಟ್ಟದ ಅಧಿಕಾರಿಗಳು ಆಗಮಿಸಿ ಮರಗಳಿಗೆ ಮೌಲ್ಯ ನಿಗದಿ ಮಾಡಿ ಅದನ್ನು ಕತ್ತರಿಸುವುದಾಗಿ ಹೇಳಿದರು. ಏಕಾ ಏಕಿ ಮರ ಕತ್ತರಿಸುವುದಾಗಿ ಹೇಳಿದ್ದರಿಂದ ಸ್ಥಳೀಯರು ಸಿಡಿದೆದ್ದು ಕಾರ್ಯಕ್ಕೆ ತಡೆ ಒಡ್ಡಿದರು.
ತಡೆ ಒಡ್ಡಿದರೆ ಪಡಿತರ ಕಾರ್ಡ್ ಸಹಿತ ಸರ್ಕಾರಿ ಸೌಲಭ್ಯ ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ಬೆದರಿಸಿದರು. ಇದಕ್ಕೂ ಬಗ್ಗದೆ ಇದ್ದಾಗ  ಪಂಚಾಯ್ತಿ ಅಧಿಕಾರಿಗಳು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕಾಯಿತು. ಜಯರಾಮ್ ನೇತೃತ್ವದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವರಿಕೆಗೆ ಯತ್ನಿಸಿದರೂ ಫಲಕಾರಿಯಾಗದೆ ಬರಿಗೈಯಲ್ಲಿ ವಾಪಸ್ ತೆರಳಿದರು.
ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಸ್ಥಳೀಯರು ಅನೇಕ ಸಮಸ್ಯೆ ಎದುರಿಸುತ್ತಿರುವುದಾಗಿ ವಾಲ್ಟರ್, ಕೆ.ರಾಮ, ಸುರೇಖ ಮೊದಲಾದ ಸ್ಥಳೀಯರು ಆರೋಪಿಸಿದ್ದಾರೆ. ಹಕ್ಕಿಗಳು, ಪ್ರಾಣಿಗಳು ಮತ್ತು ಸ್ಫೋಟಕಗಳನ್ನು ದೂರ ಮಾಡಲು ಭದ್ರತೆ ಸಿಬ್ಬಂದಿ ಅವುಗಳನ್ನು ಆವರಣ ಗೋಡೆ ಹೊರಗೆ ಹಾಕುತ್ತಾರೆ. ಇದು ನಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
'ಮನೆಗಳಲ್ಲಿ ಸ್ವಲ್ಪ ಹೊಗೆ ಕಾಣಿಸಿಕೊಂಡರೂ ಭದ್ರತೆ ಸಿಬ್ಬಂದಿ ಆಗಮಿಸಿ ಗದರುತ್ತಾರೆ. ಅವರು ಅಬಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಾರೆ ನಮ್ಮ ಪರಿಸ್ಥಿತಿ ಬಗ್ಗೆ ಗಮನ ಹರಿಸುವುದಿಲ್ಲ' ಎನ್ನುವುದು ಸ್ಥಳೀಯರ ಅಳಲು. ತುರ್ತು ನಿರ್ಗಮನಕ್ಕೆ ಹೊಸ ಗೇಟ್ ಮಾಡಲಾಗಿದೆ. ಆದರೆ ಅದು ಅದ್ಯಪಾಡಿ ಶಾಲೆಗೆ ಸಮೀಪದಲ್ಲಿದೆ. ಖಾಸಗಿ ಜಾಗದಲ್ಲಿ ಹೇಗೆ ಗೇಟ್ ನಿರ್ಮಿಸಿದರು ಎಂದು ಪರಿಸರದ ನಿವಾಸಿಗಳು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments