ಶಾಲಾ ಪರಿಸರದಲ್ಲಿ ತಂಬಾಕು ಮಾರಾಟ: ಅಂಗಡಿಗಳಿಗೆ ದಾಳಿ
ಉಪ್ಪಿನಂಗಡಿ: ಶಾಲಾ ಪರಿಸರದಲ್ಲಿ ಮಾದಕ ದ್ರವ್ಯಗಳ ಮಾರಾಟ ಮತ್ತು ಅದಕ್ಕೆ ದಾಸರಾಗುವ ವಿದ್ಯಾರ್ಥಿ ಸಮೂಹದ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾದ ಉಪ್ಪಿನಂಗಡಿ ಪೊಲೀಸ್ ಎಸ್‌ಐ ರವಿ ಬಿ.ಎಸ್ ಮತ್ತು ಎ ಎಸ್.ಐ ಸಂಜೀವ ರೈ ನೇತೃತ್ವದ ಪೊಲೀಸರು ಬುಧವಾರದಂದು ತುರ್ತು ಕಾರ್ಯಚರಣೆ ನಡೆಸಿದ್ದಾರೆ.
ಸುಮಾರು ಹದಿನೈದು ಅಂಗಡಿಗಳಿಗೆ ದಾಳಿ ನಡೆಸಿದ ಅವರು ಭಾರೀ ಪ್ರಮಾಣದ ತಂಬಾಕುವಿನಿಂದ ತಯಾರಿಸಲಾದ ಮಾದಕ ವಸ್ತುಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ಶಾಲಾ ಪರಿಸರದ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ವಸ್ತುಗಳ ಮಾರಾಟ ನಿಷೇಧ ಕಾನೂನು ನನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಹೊರಟ ಈ ಪೊಲೀಸ್ ಅಧಿಕಾರಿಗಳು ಬಾರ್ಯ, ಕಣಿಯೂರು, ತೆಕ್ಕಾರು, ಬಂದಾರು, ಹಾಗೂ ಉಪ್ಪಿನಂಗಡಿಯ ಹಲವು ಅಂಗಡಿಗಳಿಗೆ ದಾಳಿ ನಡೆಸಿದರು.
ಅಂಗಡಿಯಲ್ಲಿದ್ದ ನಿಷೇಧಿತ ವಸ್ತುಗಳನ್ನು ಮೂಟೆಗಟ್ಟಲೆ ಸಂಗ್ರಹಿಸಿ ಸ್ವಾದೀನಪಡಿಸಿಕೊಂಡಿದ್ದಾರೆ.
ಹಾಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಕೃತ್ಯವನ್ನೂ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.