ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ ನ.ಪಂ. ರು. 1.35 ಕೋಟಿ ಮಿಗತೆ ಬಜೆಟ್

Parashurama
Updated On : 14 Feb 2013, 1:01 am

ಸುಳ್ಯ: ಸುಳ್ಯ ನಗರ ಪಂಚಾಯಿತಿಯ 2013- 14ನೇ ಸಾಲಿನ ರು. 1.35 ಕೋಟಿ ಮೊತ್ತದ ಆಯವ್ಯಯ ಪಟ್ಟಿಯನ್ನು ನ.ಪಂ. ಅಧ್ಯಕ್ಷೆ ಸುಮತಿ ನಾರಾಯಣ ಮಂಡಿಸಿದರು.
ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು ಸಣ್ಣಪುಟ್ಟ ಬದಲಾವಣೆ ಮಾಡಿ ಬಜೆಟ್ ಅಂಗೀಕರಿಸಲಾಯಿತು. ನ.ಪಂ. ನ ಅವಧಿ ಈ ವಾರದಲ್ಲಿ ಮುಗಿಯಲಿದ್ದು, ಈ ಆಡಳಿತದ ಕೊನೆಯ ಸಭೆ ಇದಾಗಿತ್ತು. ಕೆಲವು ಸದಸ್ಯರು ಕೃತಜ್ಞತೆ ಸಲ್ಲಿಸಿದರು.
ಐದು ಪೈಸೆ ಬಂದಿಲ್ಲ: ಸಂಸದರ ಅನುದಾನ ಬರುವ ನಿರೀಕ್ಷೆಯನ್ನು ಆಯವ್ಯಯಕ್ಕೆ ಸೇರಿಸಲಾಗಿದೆ. ಆದರೆ, ಕಳೆದ ವರ್ಷ ಐದು ಪೈಸೆ ಬಂದಿಲ್ಲ ಎಂದು ವಿಪಕ್ಷ ನಾಯಕ ಎಂ. ವೆಂಕಪ್ಪ ಗೌಡ ಆರೋಪಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಅವರು ಶಾಸಕರ, ಸಂಸದರ ನಿಧಿಯಿಂದ ನ.ಪಂ. ಗೆ ಅನುದಾನ ಬಂದು ಅಭಿವೃದ್ಧಿ ಮಾಡಲಾಗಿದೆ. ಆದರೆ, ನ.ಪಂ.ನ ಹೆಡ್‌ಗೆ ಸೇರಿಸಿಲ್ಲ ಎಂದರು.
ಒಳ ಚರಂಡಿ ಯೋಜನೆ ಇನ್ನೂ ಮುಗಿದಿಲ್ಲ. ಇದರಿಂದ ಬರುವ ಆದಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ವೆಂಕಪ್ಪ ಗೌಡ ಪ್ರಶ್ನಿಸಿದರು.
ಕ್ರೀಡಾ ಅನುದಾನ ಹೆಚ್ಚಿಸಬೇಕು. ಮುಖ್ಯಮಂತ್ರಿ ನಮ್ಮವರೇ ಆದ ಡಿ.ವಿ. ಸದಾನಂದ ಗೌಡರು ಸಾಕಷ್ಟು ಅನುದಾನ ನೀಡಬಹುದೆಂಬ ನಮ್ಮ ಆಶಯ ಸುಳ್ಳಾಯಿತು ಎಂದರು.
ಇಂಡೋರ್ ಸ್ಟೇಡಿಯಂ ಅಪೂರ್ಣ, ಫುಟ್‌ಪಾತ್ ಅಸ್ತವ್ಯಸ್ತ, ಪುರಭವನದ ಮೂಲ ಸೌಲಭ್ಯಗಳನ್ನು ಒದಗಿಸಲಾಗದಿರುವ ಬಗ್ಗೆ ನೋವಿದೆ ಎಂದು ವೆಂಕಪ್ಪ ಗೌಡ ಅಳಲು ತೋಡಿಕೊಂಡರು.
ನ.ಪಂ. ಅಧ್ಯಕ್ಷೆ ಸುಮತಿ ನಾರಾಯಣ ಮತ್ತು ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಮಾತನಾಡಿ, ಸರ್ಕಾರದ ಅನುದಾನ ಬಳಸಿಕೊಂಡು ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ. ಹಲವಾರು ರಸ್ತೆಗಳು ಕಾಂಕ್ರಿಟಿಕರಣವಾಗಿದೆ, ನೀರು ಪೂರೈಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸದಸ್ಯೆ ಜೂಲಿಯಾನ ಕ್ರಾಸ್ತಾ, ಸರೋಜಿನಿ, ಹಾಜಿರಾ, ಪಿ.ಎ. ಮಹಮ್ಮದ್, ಎಂ. ವೆಂಕಪ್ಪ ಗೌಡ, ಮುಖ್ಯಾಧಿಕಾರಿ ರೋಹಿತಾಕ್ಷ ಮೊದಲಾದವರು ಕೃತಜ್ಞತೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments