ಇಂದಿನಿಂದ ನೇಮೋತ್ಸವ
ಮಂಗಳೂರು: ಕಂಕನಾಡಿ ರೇಲ್ವೆ ಸ್ಟೇಷನ್ ಬಲಿ ಅಳಪೆಯ ದೈವರಾಜ ಶ್ರೀಬಬ್ಬುಸ್ವಾಮಿ ದೈವಸ್ಥಾನಕ್ಕೆ ಚಂದ್ರಮಂಡಲ ರಥ ಸಮರ್ಪಣೆ, ವಾರ್ಷಿಕ ನೇಮೋತ್ಸವ ಫೆ.15ರಂದು ನಡೆಯಲಿದೆ.
ಸರ ಎಳೆದು ಪರಾರಿ
ಮಂಗಳೂರು: ಅಡ್ಯಾರು ಬಳಿ ಪಾದಚಾರಿ ಮಹಿಳೆಯ ಕತ್ತಿನಿಂದ ಮಾಂಗಲ್ಯ ಸರ ಎಗರಿಸಿ ಪರಾರಿಯಾದ ಘಟನೆ ಗುರುವಾರ ವರದಿಯಾಗಿದೆ.
ಅಶೋಕನಗರ ನಿವಾಸಿ ಕುಸುಮಾ (30)ತಾಯಿ ಮತ್ತು ಅಕ್ಕನ ಜತೆ ಮಧ್ಯಾಹ್ನ ತಂಗಿ ಮನೆಗೆ ಪೂಜೆಗೆಂದು ಹೋಗುತ್ತಿದ್ದರು. ಆಗ ಹಿಂದಿನಿಂದ ಬಂದ ಅಪರಿಚಿತ ಕತ್ತಿಗೆ ಕೈಹಾಕಿ 3 ಪವನ್ ಮಾಂಗಲ್ಯ ಸರ ಮತ್ತು 2 ಪವನ್ ಚಿನ್ನದ ಸರ ಎಗರಿಸಿದ್ದನು. ಕಳವಾದ ಸೊತ್ತಿನ ಮೌಲ್ಯ ರು. 85 ಸಾವಿರ ಎಂದು ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.