ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಈ ಮನೆಯ ನೆಮ್ಮದಿ ಎಂಡೋಗೆ ಬಲಿ!

Rashmi Kasaragodu
Updated On : 15 Feb 2013, 1:15 am

 ಬಾಲಕೃಷ್ಣ ಭೀಮಗುಳಿ
ಸುಬ್ರಹ್ಮಣ್ಯ: ಮಾರಕ ಎಂಡೋಸಲ್ಫಾನ್‌ಗೆ ಅದೆಷ್ಟೋ ಜೀವಗಳು ನರಳಾಡುತ್ತಿವೆ. ಹಲವಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಸ್ಥಿತಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಇದೆ. ಇವುಗಳ ಸಾಲಿಗೆ ಇಲ್ಲಿನ ಇನ್ನೊಂದು ಮನೆಯ ದಾರುಣ ಪರಿಸ್ಥಿತಿ ಸೇರ್ಪಡೆಯಾಗಿದೆ.
ಎಂಡೋಸಲ್ಫಾನ್‌ಗೆ ತುತ್ತಾದ ಈ ಬಾಲಕನ ಗೋಳು ಆತನ ಜೀವವನ್ನೇ ಸುಡುತ್ತಿದ್ದರೆ ಮನೆಯ ನೆಮ್ಮದಿಯನ್ನು ಬಲಿ ತೆಗೆದುಕೊಂಡಿದೆ. ಸುಬ್ರಹ್ಮಣ್ಯ ಸಮೀಪದ ಕಲ್ಲಪಣೆ ನಿವಾಸಿ ಈಶ್ವರ- ಪಾರ್ವತಿ ದಂಪತಿ ಪುತ್ರ ಹರಿಪ್ರಸಾದ್ (15) ಎಂಡೋಸಲ್ಫಾನ್‌ಗೆ ಬಲಿಯಾದ ಜೀವ. ಹುಟ್ಟಿನಿಂದಲೇ ವಿಚಿತ್ರ ಕಾಯಿಲೆಗೆ ತುತ್ತಾಗಿ ಹದಿನೈದು ವರ್ಷಗಳಿಂದ ಕರಾಳ ಬದುಕು ನಡೆಸುತ್ತಿದ್ದಾನೆ.
ಬುದ್ಧಿಮಾಂದ್ಯನಾದ ಈತನ ಗೋಳು ನಾಲ್ಕು ಗೋಡೆಗಳಿಗೆ ಸೀಮಿತವಾಗಿದೆ. ಈತನ ಕಿರುಚಾಟ- ಚೀರಾಟ ಮುಗಿಲು ಮುಟ್ಟುವಷ್ಟು ಕೇಳಿಬರುತ್ತದೆ. ಈತನ ಆಕ್ರಂದನ, ರೋದನ ಕಂಡಾಗ ಕರುಳು ಕಿತ್ತು ಬರುತ್ತದೆ. ಹೆತ್ತ ಜೀವ ಕರುಳ ಬಳ್ಳಿಯ ಸೇವೆಗಾಗಿ ಬದುಕನ್ನು ಮೀಸಲಿಟ್ಟಿದೆ. ಬೆಳಗ್ಗೆಯಿಂದ ಮಧ್ಯ ರಾತ್ರಿವರೆಗೂ ಚಿತ್ರ ವಿಚಿತ್ರ ವರ್ತನೆಯಿಂದ ಚೀರಾಡುತ್ತಿರುವ ಈತ ರೇಡಿಯೊದಲ್ಲಿನ ಹಾಡು ಕೇಳುತ್ತಲೇ ಹಾಡಿಗೆ ಮೊರೆ ಹೋಗಿ ಚೀರಾಟವನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸುತ್ತಾನೆ. ಅದು ಬಿಟ್ಟರೆ ಈತನ ನರಳಾಟ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಮುಂದುವರಿಯುತ್ತದೆ.
ತವರಿನ ನಂಟು: ಹರಿಪ್ರಸಾದ್ ಜನ್ಮ ತಾಳಿದ್ದು ತಾಯಿ ಮನೆಯಾದ ಬೆಳ್ತಂಗಡಿ ಸಮೀಪದ ಕಕ್ಕೆಪದವಿನ ಉಳಿ ಗ್ರಾಮದ ಆಗಲ್ಪ ಎಂಬಲ್ಲಿ.
ಈ ಮನೆ ಎಂಡೋಸಲ್ಫಾನ್ ಬಾಧಿತ ಪ್ರದೇಶದಲ್ಲಿದೆ. ಕೃಷಿ ಪ್ರಧಾನವಾದ ಇಲ್ಲಿ ತೆಂಗು, ಗೇರು, ಅಡಕೆ ಮೊದಲಾದ ಬೆಳೆಗಳನ್ನು ಬೆಳೆಯಲಾಗುತ್ತದೆ. ಈತನ ಜನನದ ಸಂದರ್ಭ ಎಂಡೋ ಸಲ್ಫಾನ್ ಸಿಂಪಡಿಸಲಾಗುತ್ತಿತ್ತು ಎಂಬ ಸತ್ಯವನ್ನು ಮನೆಯವರು ಬಿಚ್ಚಿಟ್ಟಿದ್ದಾರೆ. ಇದರ ಪರಿಣಾಮವೇ ಆತ ಬುದ್ಧಿಮಾಂದ್ಯನಾಗಿದ್ದಾನೆ. ಈ ನತದೃಷ್ಟ ಬಾಲಕನ ಚಿಕಿತ್ಸೆಗಾಗಿ ಪೋಷಕರು ಹಲವಾರು ವೈದ್ಯರ ಬಳಿ ಕರೆದೊಯ್ದಿದ್ದಾರೆ.
ಆಧುನಿಕ ತಪಾಸಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಲಕ್ಷಕ್ಕೂ ಮಿಕ್ಕಿ ವೆಚ್ಚ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ, ಆದರೆ ಫಲ ಶೂನ್ಯ. ವೈದ್ಯರ ಯಾವುದೇ ಚಿಕಿತ್ಸೆಗೆ ಆತ ಸ್ಪಂದಿಸಿಲ್ಲ. ವೈದ್ಯರ ಪ್ರಕಾರ ಆತನ ಮೆದುಳು ಕೆಲಸ ಮಾಡುತ್ತಿಲ್ಲ. ಹಾಗಾಗಿ ಈ ರೀತಿ ವರ್ತಿಸುತ್ತಾನೆ.



ಸಂಕಷ್ಟದಲ್ಲಿ ಕುಟುಂಬ
ಕಡು ಬಡತನದ ಕುಟುಂಬ. ಮನೆ ಯಜಮಾನನ ದುಡಿಮೆಯಲ್ಲಿ ಇಡೀ ಕುಟುಂಬದ ಬದುಕು ಸಾಗಬೇಕು. ಇನ್ನೊಬ್ಬ ಮಗನ ಶಿಕ್ಷಣದ ವೆಚ್ಚವನ್ನೂ ಭರಿಸಬೇಕು. ಕೇವಲ ಹತ್ತು ಸೆಂಟ್ಸ್ ಜಾಗದಲ್ಲಿ ಜೀವನ ಸಾಗುತ್ತಿದೆ. ಉಳಿದಂತೆ ಯಾವುದೇ ಆದಾಯ ಇಲ್ಲ. ಹರಿಪ್ರಸಾದ್ ಶೇ.90ರಷ್ಟು ಅಂಗವಿಕಲತೆಗೆ ಒಳಗಾಗಿದ್ದಾನೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಈ ಬಗ್ಗೆ ದೃಢೀಕರಣ ಪತ್ರ ನೀಡಿದ್ದಾರೆ. ಆದರೆ ಈತನಿಗೆ ಯಾವುದೇ ಭತ್ಯೆ ನೀಡಲಾಗುತ್ತಿಲ್ಲ.
ಸರ್ಕಾರಿ ಸೌಲಭ್ಯ ಸಿಕ್ಕಿಲ್ಲ
ಎಂಡೋ ಸಂತ್ರಸ್ತರ ಪಟ್ಟಿಗೆ ಈ ಕಂದನನ್ನು ಸೇರ್ಪಡೆಗೊಳಿಸುವ ಮೂಲಕ ಸರ್ಕಾರ, ಜನಪ್ರತಿನಿಧಿಗಳು ಬಡ ಕುಟುಂಬದ ನೆರವಿಗೆ ಮುಂದಾಗಬೇಕು. ಬಡತನದ ದಾರಿದ್ರ್ಯತೆ, ಕ್ರೂರ ರೋಗಕ್ಕೆ ತುತ್ತಾಗಿ ನರಕ ಸದೃಶ ರೀತಿಯಲ್ಲಿ ಬದುಕುತ್ತಿರುವ ಈ ಮುಗ್ಧ ಬಾಲಕನ ಕುಟುಂಬದ ನೋವಿಗೆ ಸಹೃದಯಿಗಳು ಸ್ಪಂದಿಸಬೇಕಿದೆ. ವಿಜಯಾ ಬ್ಯಾಂಕ್ ನ ಸುಬ್ರಹ್ಮಣ್ಯ, ಪಾರ್ವತಿ (ತಾಯಿ) ಖಾತೆ ಸಂಖ್ಯೆ- 140901010000108, ಐಋಖಈ ್ಛ್ಟಜಜ - ಗಐಒಇ 0001409 ಧನ ಸಹಾಯ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement