ಶೇ.30 ಕಡಿಮೆ ಖರ್ಚಿನಲ್ಲಿ ಸ್ಕೈ ವರ್ತ್ ಮನೆ
ಮಂಗಳೂರು: ಮೇಲ್ದರ್ಜೆ ಶ್ರೇಣಿ ಮತ್ತು ಕೈಗೆಟಕುವ ದರದಲ್ಲಿ ದೇರೇಬೈಲು ಕೊಂಚಾಡಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಸ್ಕೈವರ್ತ್ ವಸತಿ ಸಂಕೀರ್ಣ ನಿರ್ಮಾಣಗೊಳ್ಳಲಿದೆ.
ಬೆಂಗಳೂರಿನ ಪುರವಂಕರ ಪ್ರಾಜೆಕ್ಟ್ನ ಪ್ರಾವಿಡೆಂಟ್ ಹೌಸಿಂಗ್ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರು ಮನೆಗಳ ಕೋರಿಕೆ ಹೆಚ್ಚಿದ ಕಾರಣ ಉತ್ತಮ ಸೌಕರ್ಯದ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮಧು ವಿ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಟ್ಟಡ ನಿರ್ಮಾಣದ ವೆಚ್ಚ ಕಡಿತಕ್ಕೆ ತಂತ್ರಜ್ಞಾನವನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಸ್ಪರ್ಧಿಗಳಿಗಿಂತ ಶೇ.25ರಿಂದ 30 ಕಡಿಮೆ ದರದಲ್ಲಿ ಸ್ವಂತ ಮನೆ ಆಸೆ ಈಡೇರಲಿದೆ. ಕ್ರೀಡಾ ಲೋಕ, ಈಜುಕೋಳ, ಸೂಪರ್ ಮಾರ್ಕೆಟ್ ಎಲ್ಲವೂ ಇಲ್ಲಿದೆ. ಸ್ಕೈವರ್ತ್ನಲ್ಲಿ 324ಮನೆಗಳು ನಿರ್ಮಾಣಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಜಿತಾ ಕಾರ್ಯಪ್ಪ, ರಮೇಶ್ ಬಾಬು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.