ಸಲಿಂಗ ಕಾಮ: ಕಾರ್ಮಿಕನ ಕೊಲೆ
ಮಂಗಳೂರು: ಬಜ್ಪೆ ಪೆಟ್ರೋಲ್ ಬಂಕ್ ಬಳಿಯ ಕಿನ್ನಿಪದವು ಎಂಬಲ್ಲಿ ಸಲಿಂಗಕಾಮ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿ ಕುಳಾಯಿ ಗೋಕುಲನಗರ ನಿವಾಸಿ, ಕೂಲಿ ಕಾರ್ಮಿಕ ಯಶವಂತ (34). ಈತ ಬುಧವಾರ ರಾತ್ರಿ ಕೊಲೆಯಾಗಿದ್ದು ಗುರುವಾರ ಸಂಜೆ ವೇಳೆಗೆ ಮೃತದೇಹ ಕಿನ್ನಿಪದವಿನ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ದೊರೆತಿದೆ. ಘಟನೆಗೆ ಸಂಬಂಧಿಸಿದಂತೆ ಕಿನ್ನಿಪದವು ನಿವಾಸಿ ದತ್ತ (21)ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯಶವಂತನಿಗಿದ್ದ ಸಲಿಂಗ ಕಾಮದ ಚಟವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.