ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಟೆನಿಸ್, ಟಿಟಿ: ವಿಶಾಖಪಟ್ಟಣ, ಕೋಲ್ಕತ್ತಾ ಚಾಂಪಿಯನ್

Mainashree
Updated On : 16 Feb 2013, 11:00 am

ಮಂಗಳೂರು: ಎನ್‌ಎಂಪಿಟಿಯಲ್ಲಿ ನಡೆದ ಟೇಬಲ್ ಟೆನಿಸ್, ಟೆನಿಸ್ ಪಂದ್ಯಾವಳಿ ಶುಕ್ರವಾರ ಮುಕ್ತಾಯವಾಯಿತು. ಟೆನಿಸ್‌ನಲ್ಲಿ ವಿಶಾಖಪಟ್ಟಣ ಬಂದರು ತಂಡ ಸಮಗ್ರ ಚಾಂಪಿಯನ್‌ಶಿಪ್ ಗಳಿಸಿಕೊಂಡರೆ, ಟೇಬಲ್ ಟೆನ್ನಿಸ್‌ನಲ್ಲಿ ಕೋಲ್ಕತ್ತಾ ಬಂದರು ತಂಡ ಸಮಗ್ರ ಚಾಂಪಿಯನ್ ಆಗಿ ಮೂಡಿಬಂತು.  ಟೆನಿಸ್ ಹಿರಿಯ ನಾಗರಿಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗಳಿಸಿದ ಎನ್‌ಎಂಪಿಟಿಯ ಸುಕುಮಾರ್, ಹಿರಿಯರ ಡಬಲ್ಸ್‌ನಲ್ಲಿ ಚೋಕೋ ಅವರೊಂದಿಗೆ ಚಾಂಪಿಯನ್ ಪಟ್ಟವನ್ನೇರಿದರು.  ಟೇಬಲ್ ಟೆನ್ನಿಸ್‌ನ ಹಿರಿಯ ಡಬಲ್ಸ್‌ನಲ್ಲಿ ಮುಂಬಯಿನ ಯಶವಂತ ಭೂಹಿರ್ ಮತ್ತು ಬಾಬ್ಜಿ ಸಾಡ್ಯೇ ಎನ್‌ಎಂಪಿಟಿಯ ಯು. ನಾಗರಾಜ್ ಶೇಟ್ ಹಾಗೂ ಸುನಿಲ್ ಫುರ್ಟಾಡೊ ಅವರನ್ನು ಸೋಲಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಹಿರಿಯ ನಾಗರಿಕರ ವಿಭಾಗದಲ್ಲಿ ಎನ್‌ಎಂಪಿಟಿಯ ಪಿ.ಸಿ.ಚಾಕೋ ಮತ್ತು ಸುಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ.  ಜಿಲ್ಲಾಧಿಕಾರಿ ಪ್ರಕಾಶ್ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಎನ್‌ಎಂಪಿಟಿ ಅಧ್ಯಕ್ಷ ತಮಿಳ್‌ವಣ್ಣನ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement