ಮೀನು ಸಾಗಾಟ ಲಾರಿ ಪಲ್ಟಿ, ರಸ್ತೆಯಲ್ಲಿ ಮೀನು ಚೆಲ್ಲಾಪಿಲ್ಲಿ
ಮಂಗಳೂರು: ನಗರದ ಹೊರವಲಯದ ಕುಂಟಿಕಾನ ಬಳಿ ಶುಕ್ರವಾರ ಮೀನು ಸಾಗಾಟ ಲಾರಿ ಪಲ್ಟಿಯಾಗಿ ಲಕ್ಷಾಂತರ ಮೌಲ್ಯದ ಮೀನು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ನಷ್ಟ ಸಂಭವಿಸಿದೆ.
ಕೇರಳದ ಕೋಯಿಕ್ಕೋಡ್ನಿಂದ ಉಡುಪಿಗೆ 195 ಮೀನು ಪೆಟ್ಟಿಗೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುಂಟಿಕಾನ ತಿರುವಿನಲ್ಲಿ ಪಲ್ಟಿಯಾಗಿತ್ತು. ಘಟನೆಯಲ್ಲಿ ಲಾರಿ ಚಾಲಕ ರಿಯಾಜ್ ಹಾಗೂ ಕ್ಲೀನರ್ ನಝೀರ್ ಗಾಯಗೊಂಡಿದ್ದಾರೆ.
ಲಾರಿಯಲ್ಲಿದ್ದ ಮೀನು ರಸ್ತೆಗೆ ಬಿದ್ದಿದ್ದರಿಂದ ಸಾರ್ವಜನಿಕರು ತೊಟ್ಟೆಗಳಲ್ಲಿ ಅದನ್ನು ತುಂಬಿಸಿಕೊಂಡು ಮನೆಗೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿಲ್ಲ.