ಹಾಲಿ ಸದಸ್ಯರಿಗೆ ಸುಲಭ!
ಆತ್ಮಭೂಷಣ್
ಮಂಗಳೂರು: ಈ ಬಾರಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆಯುವುದು 2007ರ ಮೀಸಲಾತಿಯಂತೆ. ಇದು ಹಾಲಿ ಸದಸ್ಯರಿಗೆ ಮತ್ತೆ ಸ್ಪರ್ಧಿಸಲು ಸುಲಭ ಹಾದಿಕಲ್ಪಿಸಿದೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಬಹುತೇಕ ಮಂದಿ ಹಾಲಿ ಸದಸ್ಯರೇ ಈ ಸಲವೂ ಕಣಕ್ಕಳಿಯುವುದು ಖಚಿತ.
ಬಿಜೆಪಿ ಪಾಳಯದಲ್ಲಿ: ಮೊದಲ ಬಾರಿಗೆ 2007ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಕೊನೆ ಅವಧಿಯಲ್ಲಿ ಮೇಯರ್ ಹುದ್ದೆಯನ್ನು ತಾಂತ್ರಿಕ ಕಾರಣದಲ್ಲಿ ಕಳಕೊಂಡಿತ್ತು. ಈ ಬಾರಿ ಮತ್ತೆ ಪಾಲಿಕೆಯ ಹಿಡಿತ ಸಾಧಿಸಲು ಪ್ರಯತ್ನಿಸಲಿದೆ. ಎಷ್ಟು ಮಂದಿ ಹಾಲಿ ಸದಸ್ಯರು ಮರು ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಹಿರಿಯ ಸದಸ್ಯ ಶಂಕರ ಭಟ್ ಮತ್ತೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಒಂದೆರಡು ದಿನಗಳಲ್ಲಿ ಪ್ರತಿ ವಾರ್ಡ್ವಾರು ಸಭೆ ನಡೆಸಿ, ಅಲ್ಲಿನ ಜನತೆಯ ಒಪ್ಪಿಗೆ ನಂತರ ಸರ್ವಸಮ್ಮತವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಸೋಮವಾರ ಹೊತ್ತಿಗೆ ಎಲ್ಲ ವಾರ್ಡ್ಗಳ ಅಭ್ಯರ್ಥಿಗಳು ಯಾರು ಎಂಬುದು ಅಂತಿಮಗೊಳ್ಳಲಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವದಾಸ್.
ಕಾಂಗ್ರೆಸ್ನಲ್ಲಿ ಆತಂಕ: ಕಾಂಗ್ರೆಸ್ನಲ್ಲಿ ಹಾಲಿ ಸದಸ್ಯರೇ ಬಹಳಷ್ಟು ಮಂದಿ ಕಣಕ್ಕಿಳಿಯಲು ಸಿದ್ಧತೆಯಲ್ಲಿದ್ದಾರೆ. ಸದಸ್ಯೆಯರಾದ ಭಾರತಿ, ಗ್ರೆಟ್ಟಾ ರೆಬೆಲ್ಲೊ, ವಿಜಯಲಕ್ಷ್ಮೀ ಮತ್ತೆ ಸ್ಪರ್ಧಿಸುವ ಉತ್ಸಾಹ ತೋರುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ ಕೆಜೆಪಿಯಲ್ಲಿ ಗುರುತಿಸಿರುವ ಪಕ್ಷೇತರ ಸದಸ್ಯೆ ಮರಿಯಮ್ಮ ಥಾಮಸ್ ಮತ್ತು ಬಿಜೆಪಿಯ ಜೇಮ್ಸ್ ಡಿಸೋಜರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ನಾಲ್ಕೈದು ದಿನದಲ್ಲಿ ವಾರ್ಡ್ ಸಮಿತಿಯ ಒಪ್ಪಿಗೆ ಪಡೆದು ಬ್ಲಾಕ್ ಹಾಗೂ ಡಿಸಿಸಿ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಕೊನೆಗೊಳಿಸಲಿದೆ ಎನ್ನುತ್ತಾರೆ ಜಿಲ್ಲಾ ಮುಖಂಡರು.
40 ಸ್ಥಾನಗಳಿಗೆ ಜೆಡಿಎಸ್: ಕಳೆದ ಸಲ 29 ಸ್ಥಾನದಲ್ಲಿ ಸ್ಪರ್ಧಿಸಿ ಒಂದು ಸ್ಥಾನ ಪಡೆದಿದ್ದ ಜೆಡಿಎಸ್ ಈ ಬಾರಿ ತನ್ನ ಅಸ್ತಿತ್ವ ತೋರಿಸಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಆದ್ದರಿಂದ 40ಕ್ಕೂ ಅಧಿಕ ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಇಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಮೂರ್ನಾಲ್ಕು ದಿನಗಳಲ್ಲಿ ಆಗಬಹುದು ಎನ್ನುತ್ತಾರೆ ಚುನಾವಣಾ ಉಸ್ತುವಾರಿ ವಹಿಸಿರುವ ಎಂ. ಜಿ. ಹೆಗಡೆ.
ಕಳೆದ ಬಾರಿ ಒಂದು ಸ್ಥಾನ ಜಯಿಸಿದ್ದ ಸಿಪಿಐಎಂ ಈಗ 20 ಸ್ಥಾನಗಳಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದೆ. ಇನ್ನೆರಡು ದಿನಗಳಲ್ಲೂ ಅದೂ ಸ್ಪಷ್ಟಗೊಳ್ಳಲಿದೆ. ಎನ್ಸಿಪಿ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಹೇಳಿದೆ. ಕೆಜೆಪಿ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ನಿರ್ಧಾರ ಇನ್ನಷ್ಟೆ ಹೊರಬೀಳಬೇಕು.
ಪಾಲಿಕೆ ಮೀಸಲು ವಿವರ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದೆ. ವಾರ್ಡ್ 1-ಸಾಮಾನ್ಯ, 2-ಸಾಮಾನ್ಯ, 3-ಹಿಂದುಳಿದ ವರ್ಗ(ಎ)ಮಹಿಳೆ, 4-ಹಿಂದುಳಿದ ವರ್ಗ(ಬಿ)ಮಹಿಳೆ, 5-ಮಹಿಳೆ(ಮಹಿಳೆ), 6-ಹಿಂದುಳಿದ ವರ್ಗ(ಎ), 7-ಹಿಂದುಳಿದ ವರ್ಗ(ಎ) ಮಹಿಳೆ, 8-ಹಿಂದುಳಿದ ವರ್ಗ(ಬಿ), 9-ಸಾಮಾನ್ಯ, 10-ಹಿಂದುಳಿದ ವರ್ಗ(ಬಿ)ಮಹಿಳೆ, 11-ಪರಿಶಿಷ್ಟ ಪಂಗಡ ಮಹಿಳೆ, 12-ಸಾಮಾನ್ಯ, 13-ಸಾಮಾನ್ಯ ಮಹಿಳೆ, 14-ಹಿಂದುಳಿದ ವರ್ಗ(ಎ), 15-ಹಿಂದುಳಿದ ವರ್ಗ(ಬಿ), 16-ಹಿಂದುಳಿದ ವರ್ಗ(ಎ)ಮಹಿಳೆ, 17-ಪರಿಶಿಷ್ಟ ಜಾತಿ ಮಹಿಳೆ, 18-ಸಾಮಾನ್ಯ, 19-ಸಾಮಾನ್ಯ, 20-ಹಿಂದುಳಿದ ವರ್ಗ(ಎ), 21-ಸಾಮಾನ್ಯ, 22-ಸಾಮಾನ್ಯ ಮಹಿಳೆ, 23-ಹಿಂದುಳಿದ ವರ್ಗ(ಎ)ಮಹಿಳೆ, 24-ಸಾಮಾನ್ಯ, 25-ಹಿಂದುಳಿದ ವರ್ಗ(ಎ), 26-ಸಾಮಾನ್ಯ ಮಹಿಳೆ, 27-ಸಾಮಾನ್ಯ, 28-ಸಾಮಾನ್ಯ, 29-ಹಿಂದುಳಿದ ವರ್ಗ(ಎ)ಮಹಿಳೆ, 30-ಸಾಮಾನ್ಯ ಮಹಿಳೆ. 31-ಹಿಂದುಳಿದ ವರ್ಗ(ಎ), 32-ಸಾಮಾನ್ಯ, 33-ಸಾಮಾನ್ಯ ಮಹಿಳೆ, 34-ಹಿಂದುಳಿದ ವರ್ಗ(ಎ), 35-ಹಿಂದುಳಿದ ವರ್ಗ(ಎ), 36-ಹಿಂದುಳಿದ ವರ್ಗ(ಎ)ಮಹಿಳೆ, 37-ಸಾಮಾನ್ಯ ಮಹಿಳೆ, 38-ಹಿಂದುಳಿದ ವರ್ಗ(ಎ)ಮಹಿಳೆ, 39-ಸಾಮಾನ್ಯ, 40-ಸಾಮಾನ್ಯ ಮಹಿಳೆ, 41-ಸಾಮಾನ್ಯ, 42-ಸಾಮಾನ್ಯ ಮಹಿಳೆ, 43-ಸಾಮಾನ್ಯ ಮಹಿಳೆ, 44-ಹಿಂದುಳಿದ ವರ್ಗ(ಎ), 45-ಹಿಂದುಳಿದ ವರ್ಗ(ಎ)ಮಹಿಳೆ, 46-ಸಾಮಾನ್ಯ ಮಹಿಳೆ, 47-ಸಾಮಾನ್ಯ ಮಹಿಳೆ, 48-ಸಾಮಾನ್ಯ, 49-ಸಾಮಾನ್ಯ ಮಹಿಳೆ, 50-ಸಾಮಾನ್ಯ ಮಹಿಳೆ, 51-ಸಾಮಾನ್ಯ ಮಹಿಳೆ, 52-ಸಾಮಾನ್ಯ ಮಹಿಳೆ, 53-ಸಾಮಾನ್ಯ, 54-ಸಾಮಾನ್ಯ ಮಹಿಳೆ, 55-ಸಾಮಾನ್ಯ, 56-ಸಾಮಾನ್ಯ ಮಹಿಳೆ, 57-ಸಾಮಾನ್ಯ, 58-ಸಾಮಾನ್ಯ, 59-ಪರಿಶಿಷ್ಟ ಜಾತಿ, 60-ಸಾಮಾನ್ಯ.