ಕಾರ್ಮಿಕ ಸಂಘಟನೆಗಳ ಮುಷ್ಕರ: ಪ್ರಚಾರ ಸಭೆ
ಸುಳ್ಯ: ವಿವಿಧ ಬೇಡಿಕೆ ಈಡೇರಿಕೆಗಾಗಿ 20, 21ರಂದು ಕಾರ್ಮಿಕ ಸಂಘಟನೆಗಳು ದೇಶ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ನಿರ್ಧರಿಸಿದ್ದು ಅದರ ಪ್ರಚಾರ ಸಭೆ ಮಂಗಳವಾರ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು. ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಜಿಲ್ಲಾ ಮುಖಂಡ ಶೇಖರ್, ಕರುಣಾಕರ, ಸುರೇಶ್, ಸುಳ್ಯ ಸಿಐಟಿಯು ಮುಖಂಡ ರಾಬರ್ಟ್ ಡಿ'ಸೋಜ, ಜೋನಿ ಕಲ್ಲುಗುಂಡಿ, ಶಿವರಾಮ ಗೌಡ ಕೇರ್ಪಳ, ರಿಚರ್ಡ್ ಕ್ರಾಸ್ತಾ ಮೊದಲಾದವರು ಇದ್ದರು.