ದೇವಾಲಯಗಳಲ್ಲಿ ವಸಂತ ಶಿಬಿರ ಯೋಜನೆ: ಕೋಟ
ಪಡುಬಿದ್ರಿ: ಭಜನೆ, ಹರಿಕಥೆಗಳು, ರಾಮಾಯಣ, ಮಹಾಭಾರತ ಮೊದಲಾದ ಬಗ್ಗೆ ಪ್ರವಚನಗಳು ದೇವಾಲಯಗಳಲ್ಲಿ ನಿರಂತರವಾಗಿ ನಡೆಯಬೇಕು. ಇದಕ್ಕಾಗಿ ಇಲಾಖೆಯು ದೇವಾಲಯಗಳಲ್ಲಿ ವಸಂತ ಶಿಬಿರ ನಡೆಸುವ ಯೋಜನೆ ಹಾಕಿಕೊಂಡಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಎರ್ಮಾಳು ಶ್ರೀಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಶ್ರೀಆದಿಶಕ್ತಿ ವೀರಭದ್ರ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆ ಹಾಗೂ ದಕ್ಷಿಣಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ವಿದ್ಯಾವರ್ಧಕ ಸಂಘ ಮತ್ತು 16 ದೇವಸ್ಥಾನಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಕೌಟುಂಬಿಕ ಪದ್ಧತಿ ಈಗ ಕಾಣುತ್ತಿಲ್ಲ. ಇದನ್ನು ಉಳಿಸುವ ನಿಟ್ಟಿನಲ್ಲಿ ಈ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.