22ರಂದು ಪಡುಮಲೆ ನಾಗಬ್ರಹ್ಮ ಶಿಲಾನ್ಯಾಸ
ಪುತ್ತೂರು: ಕೋಟಿ ಚೆನ್ನಯರ ಆರಾಧ್ಯ ದೈವವಾದ ಪಡುಮಲೆ ಶ್ರೀ ನಾಗಬ್ರಹ್ಮ ಕ್ಷೇತ್ರದ ಶಿಲಾನ್ಯಾಸ ಸಮಾರಂಭವು 22ರಂದು ಪಡುಮಲೆಯ ಎದುರುಕೊಟ್ಯ ಎಂಬಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ನಿತ್ಯಾನಂದ ನಾಯಕ್ ಇಂದಾಜೆ ತಿಳಿಸಿದರು.
ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ ಎಂದರು. ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕಿ ಮಲ್ಲಿಕಾ ಪ್ರಸಾದ್ ಉದ್ಘಾಟಿಸಲಿದ್ದಾರೆ. ವಿನಯ ಕುಮಾರ್ ಸೊರಕೆ, ಜಿ.ಕೆ. ಮಹಾಬಲ ಭಟ್ ಕೋನೆತ್ತೋಟ, ಸೀತಾರಾಮ, ಮಹಾಬಲ ಪೂಜಾರಿ, ರವಿಪೂಜಾರಿ, ಬಿ. ತಿಮ್ಮಪ್ಪ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಕ್ಷೇತ್ರ ಸಂವರ್ಧನಾ ಪ್ರತಿಷ್ಠಾನದ ಸಂಚಾಲಕ ಕೆ.ಸಿ. ಪಾಟಾಳಿ ಪಡುಮಲೆ, ಉಪಾಧ್ಯಕ್ಷ ಕುದ್ಕಾಡಿ ನಾರಾಯಣ ರೈ, ಶೇಖರ ನಾರಾವಿ ಇದ್ದರು.