25ರಂದು ರೋವರ್ಸ್ ಶಿಬಿರ
ಮೂಲ್ಕಿ: ತೋಕೂರಿನ ತಪೋವನದ ಎಂ.ಆರ್. ಪೂಂಜ ಐಟಿಐನ ಎನ್ಇಟಿ ರೋವರ್ಸ್ ಘಟಕದ ಆಶ್ರಯದಲ್ಲಿ ರೋವರಿಂಗ್ ಮತ್ತು ಸಮುದಾಯ ಅಭಿವೃದ್ಧಿ ಮಾಹಿತಿ ಶಿಬಿರವು 25ರಂದು ಬೆಳಗ್ಗೆ ಐಟಿಐನ ಸೆಮಿನಾರ್ ಹಾಲ್ನಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಹಾಯಕ ಆಯುಕ್ತ ಎಂ. ಸರ್ವೋತ್ತಮ ಅಂಚನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಐಟಿಐನ ಪ್ರಾಚಾರ್ಯ ವೈ.ಎನ್. ಸಾಲ್ಯಾನ್ ವಹಿಸಲಿದ್ದು, ಸ್ಕೌಟ್ಸ್ನ ರಾಜ್ಯ ಸಂಘಟನಾ ಸಹಾಯಕ ಆಯುಕ್ತ ಎಂ. ಪ್ರಭಾಕರ ಭಟ್ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಲಿದ್ದಾರೆ. ಐಟಿಐನ ತರಬೇತು ಅಧಿಕಾರಿಗಳಾದ ರಘುರಾಮ ರಾವ್, ಸುರೇಶ್ ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.