ಒವೈಸಿ ವಿರುದ್ಧ ಸುಳ್ಯ ಕೋರ್ಟ್‌ನಲ್ಲಿ ಕೇಸು
ಸುಬ್ರಹ್ಮಣ್ಯ: ಹೈದ್ರಾಬಾದ್ ಶಾಸಕ ಅಕ್ಬರುದ್ದೀನ್ ಒವೈಸಿ ವಿರುದ್ಧ ಸುಳ್ಯ ತಾಲೂಕು ಬಳ್ಪ ಗ್ರಾಮದ ಕರುಣಾಕರ ಎಣ್ಣೆಮಜಲು ಹಾಗೂ ಗುತ್ತಿಗಾರು ಗ್ರಾಮದ ವಿಶ್ವನಾಥ ದೇವಸ್ಯ ಅವರು ಸುಳ್ಯ ಕೋರ್ಟ್‌ನಲ್ಲಿ ಫೆ. 4ರಂದು ದಾವೆ ಹೂಡಿದ್ದು, ಪ್ರಕರಣ ದಾಖಲಾಗಿದೆ.
ಹೈದರಾಬಾದ್‌ನ ಅದಿಲಾಬಾದ್‌ನ ನಿರ್ಮಲ ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೇಳದಲ್ಲಿ ಅಕ್ಬರುದ್ದೀನ್ ಒವೈಸಿ ಮಾತನಾಡಿ, 'ಹಿಂದುಗಳನ್ನು ಹೊಸಕಿ ಹಾಕುತ್ತೇನೆ. ಪೊಲೀಸರು 15 ನಿಮಿಷ ಸುಮ್ಮನಿದ್ರೆ ಸಾಕು ದೇಶದಲ್ಲಿರುವ 100 ಕೋಟಿ ನಪುಂಸಕ ಹಿಂದುಗಳನ್ನು 25 ಕೋಟಿ ಮಸ್ಲಿಮರು ಹೇಗೆ ಹೊಸಕಿ ಹಾಕುತ್ತಾರೆ' ಎಂಬಿತ್ಯಾದಿ ಹೇಳಿಕೆ ನೀಡಿ ಹಿಂದೂ ಮತ್ತು ಮುಸಲ್ಮಾನರನ್ನು ಪ್ರಚೋದಿಸಿ ಶಾಂತಿಪ್ರಿಯರಾದ ಎಲ್ಲ ಹಿಂದುಗಳ ವಿರುದ್ಧ ಯುದ್ಧ ಸಾರಿ ದೇಶದ್ರೋಹ ಕೆಲಸ ಮಾಡಿದ್ದಾರೆ.
ಹಿಂದು ಸಮಾಜವನ್ನು, ಹಿಂದುಗಳು ಪೂಜಿಸುವ ದೇವರನ್ನು ಹೀಯಾಳಿಸಿದ್ದಲ್ಲದೆ ಹಿಂದೂಗಳನ್ನು ನಪುಂಸಕರೆಂದು ಕರೆದು ಎರಡೂ ಕೋಮುಗಳ ಮಧ್ಯೆ ವಿಷ ಬೀಜ ಬಿತ್ತಿ ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕರುಣಾಕರ ಎಣ್ಣೆಮಜಲು, ವಿಶ್ವನಾಥ ದೇವಸ್ಯ ಇವರು ಖಾಸಗಿ ದೂರು ಸಲ್ಲಿಸಿದನ್ವಯ ಸುಳ್ಯ ನ್ಯಾಯಾಧೀಶರು ಸುಳ್ಯ ವೃತ್ತ ನಿರೀಕ್ಷಕರ ಮೂಲಕ ಕೇಸು ದಾಖಲಿಸಿದ್ದಾರೆ.