ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Lingaraj Badiger
Updated On : 20 Feb 2013, 11:06 am

ಮಂಗಳೂರು: ಹೊಯ್ಗೆಬೈಲು ನಿರ್ಮಾಣ ಹಂತದಲ್ಲಿರುವ ಅಶೋಕ್ ಪ್ಯಾರಡೈಸ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಮಧ್ಯಪ್ರದೇಶದ ಮಾನ್ ಸಿಂಗ್ (20) ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಸಂಜೆ ದುರ್ಘಟನೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದರು. ವಾರೀಸುದಾರರು ಮಂಗಳವಾರ ಮಧ್ಯಪ್ರದೇಶದಿಂದ ಆಗಮಿಸಿ, ಶವ ಪಡೆದುಕೊಂಡಿದ್ದಾರೆ.
ಶಿಶು ಸಾವು: ಆಕ್ರೋಶ
ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕ್ರೋಶಿತ ಜನರು ವೈದ್ಯರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.
24ರಂದು ಉಚಿತ ವೈದ್ಯಕೀಯ ತಪಾಸಣೆ
ಪುತ್ತೂರು: ನಗರದ ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯರಿಂದ ಫೆ.24ರಂದು ಉಚಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಶೋಕ್ ಪಡಿವಾಳ್ ತಿಳಿಸಿದ್ದಾರೆ. ಸಂಸ್ಥೆಯ ನುರಿತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಡಾ.ಪ್ರದೀಪ್ ಕುಮಾರ್ ಬೋರ್ಕರ್, ಡಾ. ರಾಜೇಶ್ವರಿ ಪಡಿವಾಳ್, ಡಾ. ಯಶವಂತ. ಡಾ.ರಶ್ಮಿ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಈ ವೈದ್ಯರ ತಂಡ ಪ್ರತಿ ತಿಂಗಳು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸುತ್ತಿದ್ದು, ಶಿಬಿರಗಳನ್ನು ನಡೆಸಲು ಇಚ್ಛಿಸುವವರು ಸಂಪರ್ಕಿಸುವಂತೆ ಡಾ. ಅಶೋಕ್ ಪಡಿವಾಳ್  ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement