ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಂದಾಪುರ: ಮಂಗಳಾ ಎಕ್ಸ್‌ಪ್ರೆಸ್‌ಗೆ 2 ನಿಮಿಷ ಪ್ರಾಯೋಗಿಕ ನಿಲುಗಡೆ

Lingaraj Badiger
Updated On : 20 Feb 2013, 11:00 am

ಮಂಗಳೂರು: ಕೊಂಕಣ ಮಾರ್ಗದ ಕುಂದಾಪುರ ರೈಲು ನಿಲ್ದಾಣದಲ್ಲಿ ಮಂಗಳಾ ಎಕ್ಸ್‌ಪ್ರೆಸ್‌ಗೆ ಫೆ.20ರಿಂದ 6 ತಿಂಗಳ ವರೆಗೆ ಪ್ರಾಯೋಗಿಕ ನಿಲುಗಡೆ ಕಲ್ಪಿಸಲಾಗಿದೆ.  ರೈಲು ನಂ.12617/12618 ಎರ್ನಾಕುಲಂ-ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿಗೆ ಕುಂದಾಪುರ ನಿಲ್ದಾಣದಲ್ಲಿ 2 ನಿಮಿಷ ನಿಲುಗಡೆ ಕಲ್ಪಿಸಲಾಗಿದೆ. ಎರ್ನಾಕುಲಂ-ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ಗೆ ರಾತ್ರಿ 11.36ರಿಂದ 11.38ರ ವರೆಗೆ, ನಿಜಾಮುದ್ದೀನ್-ಎರ್ನಾಕುಲಂ ಎಕ್ಸ್‌ಪ್ರೆಸ್‌ಗೆ ರಾತ್ರಿ 10.38ರಿಂದ 10.40ರ ವರೆಗೆ ನಿಲುಗಡೆ ಕಲ್ಪಿಸಲಾಗಿದೆ ಎಂದು ನೈಋತ್ಯ ರೇಲ್ವೆ ಫಾಲ್ಘಾಟ್ ವಿಭಾಗದ ಪ್ರಕಟಣೆ ತಿಳಿಸಿದೆ.
ಕಾಮಗಾರಿ: ವಿಮಾನ ನಿಲ್ದಾಣ  ನಿರ್ಗಮನ ರಸ್ತೆ ಬಂದ್
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಕಟೀಲ್-ಮಂಗಳೂರು ಹೆದ್ದಾರಿವರೆಗೆ  ತನಕ ಫೆ. 20 ರಿಂದ ಕೆಆರ್‌ಡಿಸಿಎಲ್ ವತಿಯಿಂದ ರಸ್ತೆ ಕಾಮಗಾರಿ ನಡೆಯುವುದರಿಂದ ವಿಮಾನ ನಿಲ್ದಾಣದ ನಿರ್ಗಮನ ಹಾದಿಯಲ್ಲಿ ಜುಲೈವರೆಗೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಆದ್ದರಿಂದ ವಿಮಾನ ನಿಲ್ದಾಣದ ಬಳಿಯ ಶ್ರೀ ದೇವಿ ಕಾಲೇಜ್ ರಸ್ತೆಯಿಂದ ವಾಹನಗಳು ಚಲಿಸಬೇಕಾಗಿದೆ. ವಿಮಾನ ನಿಲ್ದಾಣಕ್ಕೆ ಏಕಮುಖ ರಸ್ತೆಯಲ್ಲಿ ತಿರುವು ಇರುವುದರಿಂದ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ.
ನಾಳೆಯಿಂದ ಉಚಿತ ಸರ್ಜರಿ ತಪಾಸಣೆ ಶಿಬಿರ
ಮಂಗಳೂರು: ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಫೆ.21ರಿಂದ 23ರ ವರೆಗೆ ಉಚಿತ ಸರ್ಜರಿ ತಪಾಸಣಾ ಶಿಬಿರ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ನಡೆಯಲಿದ್ದು, ರೋಡಿಯಾಲಜಿ ಮತ್ತು ಲ್ಯಾಬ್ ಪರೀಕ್ಷೆಯಲ್ಲಿ ರಿಯಾಯ್ತಿ ನೀಡಲಾಗುವುದು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಧುಸೂದನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement