ನಾಳೆ ವಿಜಯ ಕಲಾ ಸಂಗಮ
ಮೂಲ್ಕಿ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಮೂಲ್ಕಿ ವಿಜಯ ಕಾಲೇಜಿನ ವಿಜಯ ಕಲಾಸಂಗಮದ ಆಶ್ರಯದಲ್ಲಿ ಗುರುವಾರ ಕಾಲೇಜಿನಲ್ಲಿ ವಿಜಯ ಕಲಾ ಸಂಗಮ- 2013 ಅಂತರ್ ಕಾಲೇಜು ಸ್ಫರ್ಧೆ ಜರಗಲಿದೆ.
ಬೆಳಗ್ಗೆ ಸ್ಪರ್ಧೆಯನ್ನು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಾಮಾರ್ಜುನ ಹೆಗ್ಡೆ ವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಉದ್ಯಮಿ ವಿಲಾಸ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಎಂಆರ್ಪಿಎಲ್ನ ಡಿಜಿಲಕ್ಷ್ಮೀ ಕುಮಾರನ್ ಬಹುಮಾನ ವಿತರಿಸಲಿದ್ದಾರೆ. ಜೇಸಿಸ್ನ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.