ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಕ್ತಿನಗರ: ನಾಳೆಯಿಂದ ಪ್ಯಾರಾಲಿಂಪಿಕ್ಸ್ ಆಯ್ಕೆಗೆ ವಿಶೇಷ ಮಕ್ಕಳ ಕ್ರೀಡೋತ್ಸವ

Lingaraj Badiger
Updated On : 20 Feb 2013, 10:59 am

ಮಂಗಳೂರು: ಮಾರ್ಚ್ ತಿಂಗಳಲ್ಲಿ ಒಡಿಶಾದಲ್ಲಿ ನಡೆಯುವ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಹೆಚ್ಚು ಸಾಮರ್ಥ್ಯದ ವಿಭಾಗದಿಂದ 20 ಮಂದಿ ಕ್ರೀಡಾಪಟುಗಳ ಆಯ್ಕೆಯ ರಾಜ್ಯ ಮಟ್ಟದ ಕ್ರೀಡಾಕೂಟ  ಫೆ.21ರಿಂದ 23ರ ವರೆಗೆ ಮಂಗಳೂರಿನ ಶಕ್ತಿ ನಗರದಲ್ಲಿ ನಡೆಯಲಿದೆ.
 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ಮಂಗಳೂರಿನ ಪನಾಮ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಬೆಂಗಳೂರಿನ ಸ್ಟೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ಫಾರ್ ಡಿಫರೆಂಟಲಿ ಏಬಲ್ಡ್ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆ.
 21ರಂದು ಸಂಜೆ 4.30ಕ್ಕೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಕುದ್ರೋಳಿ ಕ್ಷೇತ್ರದಿಂದ ಮಂಗಳಾ ಕ್ರೀಡಾಂಗಣ ವರೆಗೆ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಲಿದೆ. ಇದಕ್ಕೆ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡುವರು. ಸಂಜೆ 7ಕ್ಕೆ ಸಾನ್ನಿಧ್ಯದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್‌ರಿಂದ ವಿಸ್ಮಯ ಜಾದೂ ನಡೆಯಲಿದೆ.
 22ರಂದು ಬೆಳಗ್ಗೆ 10.15ಕ್ಕೆ ಶಕ್ತಿ ನಗರ ನಾಲ್ಯಪದವು ಕುವೆಂಪು ಮಾದರಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟನೆಯಾಗಲಿದೆ. ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಉದ್ಘಾಟಿಸುವರು. ಸಂಜೆ 3ಕ್ಕೆ ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಬಹುಮಾನ ವಿತರಣೆ ನಡೆಯುವುದು. ರಾತ್ರಿ 7ರಿಂದ ಸಾನ್ನಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
 23ರಂದು ವಿಶೇಷ ಮಕ್ಕಳಲ್ಲಿ ಕಡಿಮೆ ಸಾಮರ್ಥ್ಯದ ಹಾಗೂ ಹೆಚ್ಚು ಸಾಮರ್ಥ್ಯದ ಮಕ್ಕಳಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ನಡೆಯಲಿದ್ದು, ಹೆಚ್ಚು ಸಾಮರ್ಥ್ಯದ ಮಕ್ಕಳಿಗೆ 100, 200, 400 ಮೀಟರ್ ಓಟ, ಗುಂಡು ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಕಡಿಮೆ ಸಾಮರ್ಥ್ಯದ ಮಕ್ಕಳಿಗೆ 50 ಮೀಟರ್ ಓಟ ಮತ್ತು ಕ್ರಿಕೆಟ್ ಚೆಂಡು ಎಸೆತ ನಡೆಯಲಿದೆ.
ಪ್ರತಿ ಶಾಲೆಯಿಂದ ಹೆಚ್ಚು ಸಾಮರ್ಥ್ಯವುಳ್ಳ ಮಕ್ಕಳ ಒಂದು ಮಹಿಳಾ  ಹಾಗೂ ಒಂದು ಪುರುಷ ತಂಡ 4್ಗ100 ಮೀಟರ್ ರಿಲೇಯಲ್ಲಿ ಭಾಗವಹಿಸಲು ಅವಕಾಶವಿದೆ. ರಾಜ್ಯದ 16 ಜಿಲ್ಲೆಗಳ 40 ವಿಶೇಷ ಶಾಲೆಗಳಿಂದ ಸುಮಾರು 700ಕ್ಕೂ ಮಿಕ್ಕಿ ಭಿನ್ನ ಸಾಮರ್ಥ್ಯ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement