ಹಿರಿಯ ಆರೆಸ್ಸೆಸ್ ಸ್ವಯಂಸೇವಕ ನಾರಾಯಣ ನಾಯಕ್ ನಿಧನ
ಉಪ್ಪಿನಂಗಡಿ: ಕಡಬ ವಿದ್ಯಾನಗರದ ನಿವಾಸಿ, ಹಿರಿಯ ಆರ್.ಎಸ್.ಎಸ್. ಸ್ವಯಂಸೇವಕ, ಸಾಮಾಜಿಕ, ಧಾರ್ಮಿಕ ಮುಂದಾಳು ನಾರಾಯಣ ನಾಯಕ್(78) ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಆಗಿರುವ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ.
ವಿಶ್ವಹಿಂದೂ ಪರಿಷತ್ ಕಡಬ ಪ್ರಖಂಡದ ಅಧ್ಯಕ್ಷರಾಗಿ, ಕಡಬ ಶ್ರಿಕಂಠಸ್ವಾಮಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕೆನರಾ ಬ್ಯಾಂಕಿನ ಮಂಗಳೂರು, ಪುತ್ತೂರು, ತಮಿಳುನಾಡಿನ ಸೇಲಂ ಶಾಖೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಸುಳ್ಯ ತಾಲೂಕಿನ ಎಡಮಂಗಲ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರು.
ಮೃತರು ಪತ್ನಿ ಪುತ್ರರಾದ ಕಡಬ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ನಾಯಕ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.