ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ ಮಖೆ ಜಾತ್ರೆ

Lingaraj Badiger
Updated On : 21 Feb 2013, 11:16 am

ಉಪ್ಪಿನಂಗಡಿ: ನೇತ್ರಾವತಿ- ಕುಮಾರಾಧಾರಾ ನದಿ ಸಂಗಮ ತಟದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮಖೆ ಜಾತ್ರೆಯನ್ನು ಈ ಬಾರಿ ನಾಗರಿಕರೊಡಗೂಡಿ ವಿಜೃಂಭಣೆಯಿಂದ ಆಚರಿಸಲು ಕರುಣಾಕರ ಸುವರ್ಣ ಸಾರಥ್ಯದ ನೂತನ ವ್ಯವಸ್ಥಾಪನಾ ಸಮಿತಿ ಮುಂದಾಗಿದೆ. ಫೆ.21ರಿಂದ ಮಾ.19ರವರೆಗೆ ನಡೆಯುವ ಹುಣ್ಣೆಮೆ ಮಖೆ ಜಾತ್ರೆ, ಅಷ್ಟಮಿ ಮಖೆ ಜಾತ್ರೆ, ಶಿವರಾತ್ರಿ ಮಖೆ ಜಾತ್ರೆ, ಮಹಾಕಾಳಿ ಮೆಚ್ಚಿ ಹಾಗೂ ದೊಂಪದ ಬಲಿ ಕಾರ್ಯಕ್ರಮಗಳಲ್ಲದೆ ಉತ್ಸವ ನಿರ್ವಹಣೆಗಾಗಿ ಉತ್ಸವ ಸಮಿತಿ ರಚಿಸಲಾಗಿದೆ. ಉತ್ಸವದ ದ್ವಜಾರೋಹಣಕ್ಕೆ ಭಕ್ತರ ಹೊರೆಕಾಣಿಕೆಯನ್ನು ಫೆ.21ರಂದು ಮೆರವಣಿಗೆಯಲ್ಲಿ ಕರೆತರುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನೇತ್ರಾವತಿ ನದಿಯಲ್ಲೇ ಬೃಹತ್ ವೇದಿಕೆ ನಿರ್ಮಿಸಿ ಅಲ್ಲಿಯೇ  ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಯೋಜನೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement